ದೇಶ

ಅಮರನಾಥ್ ಯಾತ್ರಿಗಳ ಮೇಲೆ ದಾಳಿಯಾದರೆ ಹಜ್ ಯಾತ್ರಿಗಳಿಗೆ ಸಂಕಷ್ಟ: ಸಾಧ್ವಿ ಪ್ರಾಚಿ ಎಚ್ಚರಿಕೆ

Srinivasamurthy VN
ಮುಜಾಫರನಗರ: ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಮತ್ತೆ ಸುದ್ದಿಯಲ್ಲಿದ್ದು, ಈ ಭಾರಿ ಅಮರನಾಥ ಯಾತ್ರಾರ್ಥಿಗಳನ್ನು ತಮ್ಮ ಹೇಳಿಕೆಯ ವಿಷಯವನ್ನಾಗಿಸಿಕೊಂಡಿದ್ದಾರೆ.
ಪ್ರಸ್ತುತ ಅಮರನಾಥ ದರ್ಶನಕ್ಕೆ ಕೇಂದ್ರ ಸರ್ಕಾರ ಅಮರನಾಥ ಯಾತ್ರೆಗೆ ಚಾಲನೆ ನೀಡಿದ್ದು, ಅವರ ರಕ್ಷಣೆಗಾಗಿ "ಆಪರೇಷನ್ ಶಿವ" ಎಂಬ ಹೆಸರಿನಲ್ಲಿ ಬಿಗಿ ಭಧ್ರತೆಯನ್ನೂ ಒದಗಿಸಿದೆ. ಇದರ ನಡುವೆಯೂ ವಿಎಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಅವರಿಗೆ ಅಮರಾನಾಥ ಯಾತ್ರಾರ್ಥಿಗಳ ಭದ್ರತೆ ಬಗ್ಗೆ ದಿಗಿಲು ಮೂಡಿದ್ದು, ಅವರ ಮೇಲೆ ಹಲ್ಲೆ ಅಥವಾ ಅವರಿಗೆ ಯಾವುದೇ ರೀತಿಯ ತೊಂದರೆ ನೀಡಿದರೆ ಹಜ್ ಯಾತ್ರಾರ್ಥಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಮುಜಾಫರನಗರದಲ್ಲಿ ಅಮರನಾಥ ಯಾತ್ರೆಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಹಲವು ಬಾರಿ ವಿನಾಕಾರಣ ಅಮರನಾಥ ಯಾತ್ರಾರ್ಥಿಗಳ ಮೇಲೆ ಹಲ್ಲೆಯಾಗಿತ್ತು. ಹೀಗಾಗಿ ಈ ಬಾರಿಯೂ ಅಮರನಾಥ ಯಾತ್ರಾರ್ಥಿಗಳ ಮೇಲೆ ಹಲ್ಲೆಯಾದರೆ ಖಂಡಿತ ಹಜ್ ಯಾತ್ರಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ದಾಳಿಯಾದರೆ ಖಂಡಿತ ನಾವು ಅದಕ್ಕೆ ಹಜ್ ಯಾತ್ರೆ ವೇಳೆ ಉತ್ತರ ನೀಡುತ್ತೇವೆ ಎಂದು ಅವರು ನೇರ ಎಚ್ಚರಿಕೆ ನೀಡಿದ್ದಾರೆ.
SCROLL FOR NEXT