ದೇಶ

ಮೂರನೆ ದಿನವೂ ಮಾರನ್ ವಿಚಾರಣೆ ನಡೆಸಿದ ಸಿಬಿಐ

Lingaraj Badiger

ನವದೆಹಲಿ: ಚೆನ್ನೈನ ತಮ್ಮ ನಿವಾಸದಲ್ಲೇ ಬಿಎಸ್‌ಎನ್‌ಎಲ್ ದೂರವಾಣಿ ವಿನಿಮಯ ಕೇಂದ್ರ ಸ್ಥಾಪಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ಅವರನ್ನು ಮೂರನೇ ದಿನವಾದ ಶುಕ್ರವಾರವೂ ತೀವ್ರ ವಿಚಾರಣೆಗೆ ಒಳಪಡಿಸಿತು.

ಸಿಬಿಐನ ವಿಶೇಷ ಕಾರ್ಯಪಡೆ ಹಗರಣದ ತನಿಖೆ ನಡೆಸುತ್ತಿದ್ದು, ಕಳೆದ ಮೂರು ದಿನಗಳಿಂದ ಸಿಬಿಐನ ಕೇಂದ್ರ ಕಚೇರಿಯಲ್ಲಿ ಮಾರನ್ ಅವರನ್ನು ವಿಚಾರಣೆ ನಡೆಸುತ್ತಿದೆ.

ಸಹೋದರ ಕಲಾನಿಧಿ ಮಾರನ್ ಒಡೆತನದ ಸನ್‌ಟಿವಿಗೆ ಅನುಕೂಲ ಮಾಡಿಕೊಡಲು ಮಾರನ್ ಅವರು ಚೆನ್ನೈ ಹಾಗೂ ದೆಹಲಿ ನಿವಾಸದಲ್ಲಿ 323 ಹೈಸ್ಪೀಡ್ ಡೇಟಾ ಸಾಮರ್ಥ್ಯದ ಲೈನ್ ಸೇರಿದಂತೆ ಒಟ್ಟು 700 ಲೈನ್ ಸ್ಥಾಪಿಸಿದ ಆರೋಪ ಎದುರಿಸುತ್ತಿದ್ದಾರೆ.

SCROLL FOR NEXT