ದೇಶ

ಭಾರತ-ಅಮೆರಿಕ ಸಂಬಂಧದಲ್ಲಿ ಹೊಸ ಶಕ್ತಿ: ಮೋದಿ ವಿಶ್ವಾಸ

Sumana Upadhyaya

ನವದೆಹಲಿ: ಇಂದು(ಶನಿವಾರ) ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ 239ನೇ ಸ್ವಾತಂತ್ರ್ಯ ದಿನ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ  ಟ್ವಿಟ್ಟರ್ ನಲ್ಲಿ ಅಮೆರಿಕ ಜನತೆಗೆ ಶುಭಾಶಯ ಕೋರಿದ್ದಾರೆ.

ಭಾರತ ಮತ್ತು ಅಮೆರಿಕ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗುವ ವಿಶ್ವಾಸ ಮತ್ತು ಕುತೂಹಲ ತಮಗಿದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಬಹಳ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ನಾವು ಪ್ರಜಾಪ್ರಭುತ್ವ ಚೌಕಟ್ಟನ್ನು ಗೌರವಿಸುತ್ತೇವೆ. ಪರಸ್ಪರ ಮೌಲ್ಯಗಳನ್ನು ಗೌರವಿಸುವ, ಪ್ರೀತಿ, ವಿಶ್ವಾಸಗಳಿಂದ ಕಾಣುವ ಎರಡೂ ದೇಶಗಳ ಮಧ್ಯೆ ಹೊಸ ಬಾಂಧವ್ಯ ಏರ್ಪಟ್ಟಿದೆ ಎಂದು ಹೇಳಿದರು.

ಪ್ರಧಾನಿಯಾದ ನಂತರ ಎರಡು ಬಾರಿ ಅಮೆರಿಕಕ್ಕೆ ಹೋಗಿದ್ದು, ಅಲ್ಲಿನ ಪ್ರಧಾನಿ ಬರಾಕ್ ಒಬಾಮಾ ಅವರೂ ಕೂಡ ನಮ್ಮ ದೇಶಕ್ಕೆ ಬಂದು ಹೋಗಿದ್ದಾರೆ. ಇದರಿಂದ ಎರಡು ದೇಶಗಳ ಮಧ್ಯೆ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯ ಬೆಳೆದಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಹೇಳಿದರು.

ಅಮೆರಿಕ, ಜುಲೈ 4, 1776ರಲ್ಲಿ ಬ್ರಿಟನ್ ನಿಂದ ಪ್ರತ್ಯೇಕಗೊಂಡಿತ್ತು.

SCROLL FOR NEXT