ಸಾಂದರ್ಭಿಕ ಚಿತ್ರ 
ದೇಶ

ಅಪ್ರಾಪ್ತ ಮಗಳಿಗೆ ತಾಳಿ ಕಟ್ಟಿ ಅತ್ಯಾಚಾರ ಮಾಡುತ್ತಿದ್ದ ಅಪ್ಪನ ಬಂಧನ

ಸತತ ಒಂದು ವರ್ಷದಿಂದ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ ಕಾಮುಕ ಅಪ್ಪನನ್ನು ತಮಿಳುನಾಡಿನ ಮಧುರೈ ಗ್ರಾಮಾಂತರ ಪೊಲೀಸರ ಬಂಧಿಸಿದ್ದಾರೆ.

ಮಧುರೈ: ಸತತ ಒಂದು ವರ್ಷದಿಂದ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದ ಕಾಮುಕ ಅಪ್ಪನನ್ನು ತಮಿಳುನಾಡಿನ ಮಧುರೈ ಗ್ರಾಮಾಂತರ ಪೊಲೀಸರ ಬಂಧಿಸಿದ್ದಾರೆ.

ಖಾಸಗಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಿ. ಗಣೇಶ್ ಮೂರ್ತಿ ಬಂಧಿತ ಆರೋಪಿ. ಈತ 7ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ತನ್ನ ಮಗಳ ಮೇಲೆ ಕಳೆದ ಒಂದು ವರ್ಷದಿಂದ ಈ ದುಷ್ಕತ್ಯ ಎಸಗುತ್ತಿದ್ದ. ಹೊರಗಡೆ ಯಾರ ಬಳಿಯಾದರೂ ವಿಷಯ ಬಹಿರಂಗ ಪಡಿಸಿದರೇ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ.

 ಗಾಂಜಾ ವ್ಯಸನಿಯಾಗಿದ್ದ ಗಣೇಶ ಮೂರ್ತಿ ಪ್ರತಿ ಬಾರಿ ಮಗಳ ಮೇಲೆ ಅತ್ಯಾಚಾರ ಮಾಡುವಾಗ ಆಕೆಯ ಕುತ್ತಿಗೆಗೆ ತಾಳಿ ಕಟ್ಟುತ್ತಿದ್ದ. ಮೂವರು ಹೆಣ್ಣು ಮಕ್ಕಳ ತಂದೆಯಾಗಿರುವ ಆರೋಪಿ ತನ್ನ ಇನ್ನಿಬ್ಬರು ಮಕ್ಕಳ ಮುಂದೆಯೇ ದೊಡ್ಡ ಮಗಳ ಮೇಲ ಅತ್ಯಾಚಾರವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳು ಲೈಂಗಿಕ ಕ್ರಿಯಗೆ ಸಹಕರಿಸದಿದ್ದರೇ ಚೆನ್ನಾಗಿ ಥಳಿಸುತ್ತಿದ್ದ ಗಣೇಶಮೂರ್ತಿ, ತನ್ನ ಇನ್ನಿಬ್ಬರು ಮಕ್ಕಳ ಮೇಲೆ ಅತ್ಯಾತಾರ ವೆಸಗುವುದಾಗಿ ಬೆದರಿಸುತ್ತಿದ್ದ. ಗಣೇಶ ಮೂರ್ತಿ ಗುರುವಾರ  ತೆಪ್ಪಕುಲಮ್ ನಲ್ಲಿರುವ ತನ್ನ ಸಂಬಂಧಿ ಮನೆಗೆ ತನ್ನ ದೊಡ್ಡ ಮಗಳನ್ನು ಕರೆದೊಯ್ದಿದ್ದ. ಈ ವೇಳೆ ಬಾಲಕಿ ಸಂಬಂಧಿಕರಿಗೆ ವಿಷಯ ತಿಳಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.  ನಂತರ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿ ಬಾಲಕಿಯನ್ನು ಮಕ್ಕಳ ಸಹಾಯ ಕೇಂದ್ರದಲ್ಲಿ ಇರಿಸಲಾಗಿದೆ.







Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ