ದೇಶ

ಏರ್ ಇಂಡಿಯಾ ಆಹಾರದಲ್ಲಿ ನೊಣ ಪತ್ತೆ!

Rashmi Kasaragodu

ನವದೆಹಲಿ : ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣದ ವೇಳೆ ನೀಡುವ ಉಪಾಹಾರದಲ್ಲಿ ಹಲ್ಲಿ ಪತ್ತೆಯಾದ ಬೆನ್ನಲ್ಲೆ, ಇದೀಗ ನೊಣ ಪತ್ತೆಯಾಗಿದೆ!

ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಕೋಲ್ಕತ್ತಾಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಆಹಾರದಲ್ಲಿ ನೊಣವಿತ್ತು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ. ನಿನ್ನೆ (ಶನಿವಾರ) ಈ ಘಟನೆ ನಡೆದಿದೆ.

ಆದರೆ, ಆಹಾರದಲ್ಲಿ ಕೀಟವಿತ್ತು ಎಂದು ಆರೋಪಿಸಿದ ಪ್ರಯಾಣಿಕ ತಮಗೆ ಮಾದರಿಯನ್ನು ನೀಡಿಲ್ಲವಾದ್ದರಿಂದ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಲಾಗದು ಎಂದು ಏರ್ ಇಂಡಿಯಾ ಪ್ರತಿಕ್ರಿಯಿಸಿದೆ.

‘ಆಹಾರದಲ್ಲಿ ‘ಕೀಟ’ವಿತ್ತು ಎಂಬ ಅಂಶವನ್ನು ಕಠ್ಮಂಡು–ಕೋಲ್ಕತ್ತ ನಡುವಣ ವಿಮಾನದ ಪ್ರಯಾಣಿಕರೊಬ್ಬರು ನಮ್ಮ ಗಮನಕ್ಕೆ ತಂದಿದ್ದಾರೆ. ಆದರೆ, ಅವರು ಆಹಾರದ ಮಾದರಿಯನ್ನು ನಮ್ಮೊಂದಿಗೆ ಹಂಚಿಕೊಂಡಿಲ್ಲ ಅಥವಾ ಅದನ್ನು ತನಿಖೆಗೆ ಒಳಪಡಿಸಲು ಮರಳಿಸಿಲ್ಲ. ಆದ್ದರಿಂದ ನಾವು ಆರೋಪವನ್ನು ಖಚಿತಪಡಿಸಲಾಗದು ಎಂದು ಏರ್‌ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಥ ದೂರುಗಳನ್ನು ಏರ್‌ ಇಂಡಿಯಾ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸುತ್ತದೆ. ಆದರೆ, ಅವರು ತನಿಖೆಗಾಗಿ ಮಾದರಿಯನ್ನು ನೀಡುವ ಅಗತ್ಯವಿತ್ತು’ ಎಂದೂ ಏರ್ ಇಂಡಿಯಾ ಹೇಳಿದೆ.

SCROLL FOR NEXT