ನವದೆಹಲಿ: ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸಾವಿನ ಕುರಿತ ದಾಖಲೆಗಳನ್ನು ಬಹಿರಂಗಪಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಶಾಸ್ತ್ರಿ ಅವರ ಪುತ್ರ ಬಿಜೆಪಿ ಮುಖಂಡ ಸುನೀಲ್ ಶಾಸ್ತ್ರಿ ಮನವಿ ಮಾಡಿದ್ದಾರೆ.
ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಅಚಾನಕ್ ಸಾವು ಕುರಿತಂತೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಅವರ ಸಾವಿನ ಕುರಿತಂತೆ ಸಂಪೂರ್ಣ ದಾಖಲೆಗಳನ್ನು ಬಹಿರಂಗಪಡಿಸಿ ಅನುಮಾನಗಳಿಗೆ ತೆರೆ ಎಳೆಯಬೇಕು. ಈ ಹಿಂದೆಯೂ ಸಹ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದಾಖಲೆ ಬಹಿರಂಗಪಡಿಸುವಂತೆ ಮನವಿ ಮಾಡಿದ್ದೆ ಆದರೆ ಅದು ಸಾಧ್ಯವಾಗಿಲ್ಲ. ಇಗಲಾದರು ವರದಿಯನ್ನು ಬಹಿರಂಗಪಡಿಸಿ ದೇಶದ ಜನತೆಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸಾವಿನ ಕುರಿತಂತೆ ಸತ್ಯ ತಿಳಿಯಲಿ ಎಂದು ಸುನೀಲ್ ಶಾಸ್ತ್ರಿ ಪ್ರಧಾನಿಗೆ ಮನವಿ ಮಾಡಿದ್ದಾರೆ.
'ಭಾರತ- ಪಾಕಿಸ್ಥಾನ(1965) ಯುದ್ಧದ ನಂತರ ನನ್ನ ತಂದೆ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ತಾಷ್ಕಂಟ್ ಒಪ್ಪಂದಕ್ಕೆ ಸಹಿ ಮಾಡಲು ಪಾಕಿಸ್ತಾನಕ್ಕೆ ಹೊರಟಾಗ ಸಂಪೂರ್ಣವಾಗಿ ಸ್ವಸ್ಥರಾಗಿದ್ದರು. ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಏರುಪೇರಾಗಿರಲಿಲ್ಲ. ಆದರೆ 1966, ಜನವರಿ 11ರ ರಾತ್ರಿ ಅವರು ಅಚಾನಕ್ ಆಗಿ ಮೃತ ಪಟ್ಟಿದ್ದು ಹೇಗೆ?" ಎಂದು ಶಾಸ್ತ್ರೀ ಪ್ರಶ್ನಿಸಿದ್ದಾರೆ.
ತಾಷ್ಕೆಂಟ್‌ನಲ್ಲಿ ಮಾಜಿ ಪ್ರಧಾನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೃದ್ಧಾಂಜಲಿಯನ್ನು ಅರ್ಪಿಸಿದ್ದರು. ಇದೇ ಸಮಯದಲ್ಲಿ ಸುನೀಸ್ ಶಾಸ್ತ್ರಿ ನಮ್ಮ ತಂದೆಯವರ ಸಾವಿನ ಹಿಂದಿರುವ ಸತ್ಯ ಹೊರಗೆ ಬಂದರೆ ನಮ್ಮ ಮನಸ್ಸು ಹಗುರವಾಗುತ್ತದೆ. ಹೀಗಾಗಿ ತಂದೆಯ ಸಾವಿನ ರಹಸ್ಯ ಹೊರಬರಲು ಮೋದಿ ನೆರವಾಗುತ್ತಾರೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.