ತಿರುವನಂತಪುರ: ಕೇರಳದಲ್ಲಿ ನೂತನ ಆಲ್ಕೋಹಾಲ್ ನೀತಿ ಜಾರಿ ವಿರೋಧಿಸಿ ಕೇರಳ ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಬಾರ್ ಮಾಲೀಕರ ಪರವಾಗಿ ಅಟಾರ್ನಿ ಜನರಲ್ ವಾದ ಮಂಡನೆ ಮಾಡಿದ್ದಕ್ಕೆ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಅವರು ನಿರ್ಧಾರಿಸಿರುವುದಾಗಿ ಅಧಿಕೃತ ಕಚೇರಿ ಹೊರಡಿಸಿರುವ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.
ಬಾರ್ ಮಾಲೀಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಅಟಾರ್ನಿ ಜನರಲ್ ಅವರು ಬಾರ್ ಮಾಲೀಕರ ಪರವಾಗಿ ವಾದ ಮಂಡಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಧೋರಣೆ ಸರಿಯಿಲ್ಲ ಎಂಬುದರ ಕುರಿತು ಪ್ರಧಾನಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.