ದೇಶ

ಕಿಡಿ ಹೊತ್ತಿಸುವವರ ನಡುವೆಯೇ ಕಲೆಯ ಬೆಳಗಿಸಿದ ಕಲಾಪ್ರೇಮಿ!

Mainashree

ಇಸ್ಲಾಮಾಬಾದ್: ಒಮ್ಮೆ ಶಾಂತಿಯುತ ಮಾತುಕತೆ, ಮತ್ತೊಮ್ಮೆ ದ್ವೇಷದ ಕಿಡಿ... ಈ ರೀತಿಯಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಏರುಪೇರಾಗುತ್ತಿದ್ದರೂ ಪಾಕಿಸ್ತಾನದ ಕಲಾಪ್ರೇಮಿಯೊಬ್ಬರು ``ಕಲೆಗೆ ಧರ್ಮದ ಹಂಗಿಲ್ಲ'' ಎಂಬ ಮಾತಿಗೆ ಬದ್ಧರಾಗಿ ಬದುಕುತ್ತಿದ್ದಾರೆ. ಆ ಕಲಾಪ್ರೇಮಿಯ ಹೆಸರು ಇಕ್ಬಾಲ್ ಹುಸೇನ್. ಹಿಂದೂ ದೇವ, ದೇವತೆಗಳ ವಿಗ್ರಹಗಳನ್ನು ಸಂಗ್ರಹಿಸುವುದು ಇವರ ಹವ್ಯಾಸ. ಲಾಹೋರ್‍ನ ಕೆಂಪುದೀಪದ ಪ್ರದೇಶವೆಂದೇ ಕರೆಯಲ್ಪಡುವ ಹೀರಾ ಮಂಡಿಯಲ್ಲಿ ಬೆಳೆದಿರುವ ಹುಸೇನ್, ಹಿಂದೂ, ಜೈನ ಮತ್ತು ಬೌದಟಛಿರ ವಿಗ್ರಹಗಳನ್ನು ಸಂಗ್ರಹಿಸಿ, ತನ್ನ ಕುಕೂಸ್ ಡೆನ್ ರೆಸ್ಟೋರೆಂಟ್‍ನಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಇವರ ತಾಯಿ ನವಾಬ್ ಬೇಗಂ ಭಾರತೀಯ ಮೂಲದವರು. ಮೂಲತಃ ಹಿಂದೂ. ಈಗ ಅವರು ಲಾಹೋರ್‍ನ ಕೆಂಪು ದೀಪದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ಬದುಕು ಸವೆಸುತ್ತಿದ್ದಾರೆ. ನನ್ನ ಹಿನ್ನೆಲೆಯೇನು ಎಂಬುದನ್ನು ಹೇಳಿಕೊಳ್ಳಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎನ್ನುತ್ತಾರೆ ಹುಸೇನ್.
ಬೆದರಿಕೆಗೆ ಬಗ್ಗಲಿಲ್ಲ: 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಬಳಿಕ ಪ್ರತಿಭಟನಾಕಾರರ ದಾಳಿಗೆ ಅನೇಕ ದೇವಾಲಯಗಳು ತುತ್ತಾಗಿದ್ದವು. ಪಾಕಿಸ್ತಾನದಲ್ಲಿ ಇವರ ಆಕ್ರೋಶಕ್ಕೆ 300ರಷ್ಟು ದೇಗುಲಗಳು ನೆಲಸಮವಾಗಿದ್ದವು. ಲಾಹೋರ್‍ನ ಪ್ರಸಿ ಭೈರೋನ್, ಜೈನ್, ದುರ್ಗಾ ಮತ್ತು ಶಿವ ದೇವಾಲಯಗಳಲ್ಲಿದ್ದ ವಿಗ್ರಹಗಳು ಮುರಿದುಹೋಗಿದ್ದವು. ಹುಸೇನ್ ಅವರು ಈ ಪ್ರದೇಶಗಳಿಗೆ ಹೋಗಿ ಇವುಗಳನ್ನೆಲ್ಲ ಸಂಗ್ರಹಿಸಿದ್ದಾರೆ. ಪ್ರತ್ಯೇಕತಾವಾದಿಗಳ ಬೆದರಿಕೆಗೂ ಬಗ್ಗದೇ ತಮ್ಮ ಕಲಾಪ್ರೀತಿಯನ್ನು ತೋರ್ಪಡಿಸಿದ್ದಾರೆ.
ಆಡ್ವಾಣಿಯೂ ಭೇಟಿ ನೀಡಿದ್ದರು: ಹುಸೇನ್‍ರ ಚಿತ್ರಾಗಾರವು ಭಾರತ ಸೇರಿದಂತೆ ದೇಶ- ವಿದೇಶಗಳ ಹಲವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಚಿತ್ರ ನಿರ್ದೇಶಕ ಮಹೇಶ್ ಭಟ್, ಬಾಲಿವುಡ್ ತಾರೆಯರಾದ ನಾಸಿರುದ್ದೀನ್ ಶಾ, ಮಲೈಕಾ ಅರೋರಾ, ಗಾಯಕ ಹರಿಹರನ್ ಸೇರಿದಂತೆ ಅನೇಕರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಮೈಲ್ ಟುಡೇ ವರದಿ ಮಾಡಿದೆ.

SCROLL FOR NEXT