ಜೆಡಿ(ಯು) ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ 
ದೇಶ

ವ್ಯಾಪಂ ಹಗರಣ: ಬಿಜೆಪಿ ನಾಯಕರ ಹೇಳಿಕೆ ಖಂಡಿಸಿದ ಜೆಡಿ(ಯು)

ಮಧ್ಯಪ್ರದೇಶದ ಬಹುಕೋಟಿ ಹಾಗೂ ನಿಗೂಢ ಸಾವುಗಳ ಪ್ರಕರಣ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ನಂದಕುಮಾರ್ ಸಿಂಗ್ ಚೌಹಾಣ್ ನೀಡಿದ್ದ ಹೇಳಿಕೆಯನ್ನು ಸಂಯುಕ್ತ ಜನತಾದಳ ಪಕ್ಷ ಸೋಮವಾರ ಖಂಡಿಸಿದೆ...

ನವದೆಹಲಿ: ಮಧ್ಯಪ್ರದೇಶದ ಬಹುಕೋಟಿ ಹಾಗೂ ನಿಗೂಢ ಸಾವುಗಳ ಪ್ರಕರಣ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ನಂದಕುಮಾರ್ ಸಿಂಗ್ ಚೌಹಾಣ್ ನೀಡಿದ್ದ ಹೇಳಿಕೆಯನ್ನು  ಸಂಯುಕ್ತ ಜನತಾದಳ ಪಕ್ಷ ಸೋಮವಾರ ಖಂಡಿಸಿದೆ.

ವ್ಯಾಪಂ ಹಗರಣದ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಬಿಜೆಪಿ ನಾಯಕ ನಂದಕುಮಾರ್ ಸಿಂಗ್ ಚೌಹಾಣ್ ಅವರು, ಪ್ರಕರಣ ಸಂಬಂಧ ನಮಗೆ ಯಾವುದೇ ರೀತಿಯ ವಿಷಾದವಿಲ್ಲ. ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಜೆಡಿ(ಯು) ಪಕ್ಷದ ವಕ್ತಾರ ಕೆ.ಸಿ.ತ್ಯಾಗಿ ಅವರು, ಬಿಜೆಪಿ ಪಕ್ಷದ ನಾಯಕರು ನೀಡುತ್ತಿರುವ ಈ ರೀತಿಯ ಹೇಳಿಕೆಗಳು ಸಿಬಿಐ ತನಿಖೆಯ ಮೇಲೆ ಪರಿಣಾಮ ಬೀರಲಿದ್ದು, ಕೂಡಲೇ ಇಂತಹ  ಹೇಳಿಕೆ ನೀಡುವುದನ್ನು ನಾಯಕರು ಬಿಡಬೇಕೆಂದು ಹೇಳಿದ್ದಾರೆ.

ಮಧ್ಯಪ್ರದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನಿಗೂಢ ಸಾವಿನ ಪ್ರಕರಣ ಬಹುಕೋಟಿ ವ್ಯಾಪಂ ಹಗರಣವನ್ನು ಸಿಬಿಐ ತನಿಖಾ ತಂಡ ಇಂದಿನಿಂದ ತನ್ನ ತನಿಖೆಯನ್ನು ಆರಂಭಿಸಿದ್ದಾರೆ. ತನಿಖಾ ತಂಡದ ಸದಸ್ಯರು ದೆಹಲಿಯಿಂದ ಭೂಪಾಲ್ ಗೆ ತೆರಳಿದ್ದು, ಸುಪ್ರೀಂಕೋರ್ಟ್ ಆದೇಶದಂತೆ ವ್ಯಾಪಂ ಹಗರಣವನ್ನು ತನಿಖೆ ನಡೆಸಲು ಸಿಬಿಐ ತಂಡದ 40 ಸದಸ್ಯರನ್ನು ನೇಮಿಸಲಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್