ಕುವೈಟ್ ಸಿಟಿ: ಕುಬೇರನಾಗಿದ್ದರೂ ಮಸೀದಿ ಮುಂದೆ ಭಿಕ್ಷೆ ಬೇಡುತ್ತಾ ಬಡವನಂತೆ ನಟಿಸುತ್ತಿದ್ದ ವ್ಯಕ್ತಿಯೀಗ ಪೊಲೀಸರ ಅತಿಥಿಯಾಗಿದ್ದಾನೆ.
ವಿದೇಶಿಯೊಬ್ಬ ಕುವೈಟ್‍ನ ಮಸೀದಿಯೊಂದರ ಮುಂದೆ ಭಿಕ್ಷುಕನಂತೆ ಕುಳಿತು, ಎಲ್ಲರ ಮುಂದೆ ಕೈಯೊಡ್ಡುತ್ತಿದ್ದ. 'ನನಗೆ ಹಣದ ಬಹಳ ಅವಶ್ಯಕತೆಯಿದೆ. ಸ್ವಂತ ಮನೆಯೂ ಇಲ್ಲದ ನತದೃಷ್ಟ ನಾನು' ಎನ್ನುತ್ತಾ ಮಸೀದಿಗೆ ಬಂದವರಿಂದ ಹಣ ಪಡೆಯುತ್ತಿದ್ದ.
ಗಸ್ತು ತಿರುಗುತ್ತಿದ್ದ ಫೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಾಗಲೇ ಸತ್ಯ ಬಯಲಾಗಿದ್ದು. ವಿಚಾರಣೆ ನಡೆಸಿ ನೋಡಿದಾಗ ಈತನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ ರು. 10 ಕೋಟಿ(5 ಲಕ್ಷ ಕುವೈಟ್ ದಿನಾರ್)ಯಿರುವುದು ಬೆಳಕಿಗೆ ಬಂದಿದೆ. ಗಲ್ಫ್ ಸಹಕಾರ ಮಂಡಳಿಯ ಸದಸ್ಯ ರಾಷ್ಟ್ರವಾಗಿರುವ ಕುವೈಟ್‍ನಲ್ಲಿ ಭಿಕ್ಷೆ ಬೇಡುವುದು ಕಾನೂನುಬಾಹಿರ.