ನವದೆಹಲಿ: ದೀರ್ಘಾವಧಿಯ ವೀಸಾ ಪಡೆದು ಭಾರತದಲ್ಲಿರುವ ಪಾಕಿಸ್ತಾನದ ಹಿಂದೂಗಳಿಗೆ ಬ್ಯಾಂಕ್ ಖಾತೆ ತೆರೆಯುವ ಹಾಗೂ ಭಾರತದಲ್ಲಿ ನಿವೇಶನ ಖರೀದಿಸುವ ಅನುಮತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ.
ಎಕೆನಾಮಿಕ್ ಟೈಮ್ಸ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ದೀರ್ಘಾವಧಿಯ ವೀಸಾ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ವಸಲೇ ಬಂದಿರುವ ಹಿಂದೂಗಳಿಗಳು ಘನತೆಯಿಂದ ಜೀವನ ನಡೆಸುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ವೀಸಾ ಆಧಾರದಲ್ಲಿ ಅವರಿಗೆ ಬ್ಯಾಂಕ್ ಖಾತೆ ಹಾಗೂ ಅಸ್ತಿ ಖರೀದಿ ಮಾಡಲು ಅನುಮತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಇದು ನೀತಿಯಾಗಿ ಬದಲಾವಣೆಯಾದರೆ ಭಾರತದ ಪೌರತ್ವ ಇಲ್ಲದೆಯೇ ಪಾಕಿಸ್ತಾನದ ಹಿಂದೂಗಳನ್ನು ಭಾರತದ ಆರ್ಥಿಕತೆಯೊಂದಿಗೆ ಬೆಸೆಯುವುದಕ್ಕೂ ಈ ಕ್ರಮ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ, ಹೊರದೇಶಗಳಲ್ಲಿ ಕಿರುಕುಳಕ್ಕೀಡಾದ ಹಿಂದೂಗಳ ಬಗ್ಗೆ ಕಾಳಜಿ ಇದ್ದು, ಅವರ ಅಭಿವೃದ್ಧಿ ಬಗ್ಗೆ ಜವಾಬ್ದಾರಿ ಹೊಂದಿರುವುದಾಗಿ ತಿಳಿಸಿದ್ದರು. ಅಲ್ಲದೇ ವಿದೇಶಗಳಲ್ಲಿರುವ ಹಿಂದೂಗಳಿಗೆ ಸ್ಥಾನ ಇರುವುದು ಭಾರತದಲ್ಲಿ ಮಾತ್ರವೇ ಎಂದು ತಿಳಿಸಿದ್ದರು. ಹೊರದೇಶಗಳಲ್ಲಿರುವ ಭಾರತೀಯ ಮೂಲದವರಿಗೆ ಬ್ಯಾಂಕ್ ಖಾತೆ ಹಾಗೂ ಅಸ್ತಿ ಖರೀದಿಸುವುದಕ್ಕೆ ಈಗಾಗಲೇ ರಿಸರ್ವ್ ಬ್ಯಾಂಕ್ ಒಪ್ಪಿಗೆ ನೀಡಿದೆ.