ಕಾನ್ಪುರ: ಕಾನ್ಪುರದ ನಜೀರಬಾದ್ ಪೊಲೀಸ್ ಠಾಣೆಗೆ ದಡದಡನೆ ಓಡೋಡಿ ಬಂದ ಆ ಮಹಿಳೆ ತನ್ನ ಸರ ಅಪಹರಣವಾದ ಬಗ್ಗೆ ದೂರಿದ್ದರು, ಪ್ರಕರಣ ದಾಖಲಿಸುವುದಂತೆ ಪೊಲೀಸರಿಗೆ ಮನವಿ ಮಾಡಿದರು.
ಆದರೆ, ಪೊಲೀಸರು ಮಾತ್ರ ಕಂಗಾಲು... ಯಾಕೆಂದರೆ, ಆಕೆ ದೂರು ಕೊಟ್ಟದ್ದು ಕೋತಿ ಮೇಲೆ. `ಒಂದು ವೇಳೆ ವ್ಯಕ್ತಿ ಸರ ಅಪಹರಿಸಿದ್ದರೆ ಎಫ್ಐಆರ್ ದಾಖಲಿಸಬ ಹುದಾಗಿತ್ತು. ಆದರೆ, ಯಾವ ಕೋತಿ ಮೇಲೆ, ಹೇಗೆ ಪ್ರಕರಣ ದಾಖಲಿಸುವುದು ಎಂಬುದು ತಿಳಿಯುತ್ತಿಲ್ಲ' ಎಂದು ನಜೀರ ಬಾದ್ ಠಾಣೆಯ ಇನ್ಸ್‍ಪೆಕ್ಟರ್ ಅಖಿಲೇಶ್ ಗೌರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ದೇವಾಲಯಕ್ಕೆ ಹೊರಟಿದ್ದ ವೇಳೆ ಊರ್ಮಿಳಾ ಎಂಬಾಕೆ ದಾಳಿ ಮಾಡಿದ್ದ ಕೋತಿ, ಆಕೆಯ ಕತ್ತಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿತ್ತು. ಅರ್ಧ ಭಾಗ ಸರವನ್ನು ತುಂಡರಿಸಿಕೊಂಡ ಕೋತಿ ಪರಾರಿಯಾಗಿತ್ತು. ದೂರಿನ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿ ಶೀಲಿಸಿದರು. `ಜನರಿಗೆ ತೊಂದರೆ ನೀಡುತ್ತಿರುವ ಕೋತಿಗಳನ್ನು ಹಿಡಿಯುವಂತೆ ನಗರಾಡಳಿತಕ್ಕೆ ನಾವು ಮನವಿ ಮಾಡಿದ್ದೇವೆ' ಎಂದು ಪೊಲೀಸರು ತಿಳಿಸಿದ್ದಾರೆ.