ಅಹಮದಾಬಾದ್: ಪ್ರಸಿದ್ಧ ಜಗನ್ನಾಥ ದೇವಾಲಯಕ್ಕೆ ಮುಸಲ್ಮಾನರು ಬೆಳ್ಳಿಯ ರಥವನ್ನು ದೇಣಿಗೆಯಾಗಿ ನೀಡಿದ್ದಾರೆ.
ಜಗನ್ನಾಥನ ಅದ್ದೂರಿ ರಥಯಾತ್ರೆ ನಡೆಯುವ ಮುನ್ನ ಮುಸಲ್ಮಾನರೆಲ್ಲರು ಒಂದುಗೂಡಿ ರಥವನ್ನು ದೇವಾಲಯದ ಪ್ರಧಾನ ಅರ್ಚಕರಿಗೆ ನೀಡಿ ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ನಾವು ಪ್ರತಿ ವರ್ಷವೂ ಇಂತಹ ದೇಣಿಗೆಯನ್ನು ನೀಡುವ ಮೂಲಕ ಧಾರ್ಮಿಕ ಭಾವೈಕ್ಯತೆ, ಕೋಮು ಸಾಮರಸ್ಯ ನೆಲೆಸಲು ಪ್ರಾರ್ಥಿಸುತ್ತೇವೆ ಎಂದು ದಾನ ನೀಡಿದವರಲ್ಲಿ ಒಬ್ಬರಾದ ರೌಫ್ ಬಂಗಾಲಿ ಹೇಳಿದ್ದಾರೆ.
ಜಗನ್ನಾಥ ದೇವರ ರಥಯಾತ್ರೆ ಹಾಗೂ ಮುಸ್ಲೀಮರ ರಮ್ಜಾನ್ ಏಕಕಾಲದಲ್ಲಿ ಬಂದಿರುವುದು ಎಲ್ಲರಿಗೂ ಮಂಗಳಕರ ಸುಸಂದರ್ಭ ಎಂದು ಅವರು ಹೇಳಿದರು.