ಮುಂಬೈ: ಮ್ಯಾಗಿ ಬಳಿಕ ಗ್ರಾಹಕರಿಗೆ ಮತ್ತೊಂದು ಆಘಾತ. ಈಗ ಮಿನರಲ್ ವಾಟರ್ ಮತ್ತು ಹಾಲು ಕುಡಿಯುವಾಗಲೂ ಜನ ಹೆದರಬೇಕಾದ ಸ್ಥಿತಿ ಎದುರಾಗಿದೆ. ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿರುವ ಆಹಾರ ಮತ್ತು ಔಷಧ ನಿರ್ವಹಣೆ ಸಂಸ್ಥೆಯು, ಸಾಮಾನ್ಯ ನೀರನ್ನು ಮಿನರಲ್ ವಾಟರ್ ಎಂದು ಮಾರಾಟ ಮಾಡುವ 3 ಪ್ರಕರಣ ಗಳನ್ನು ಪತ್ತೆಹಚ್ಚಿದೆ. ಅಷ್ಟೇ ಅಲ್ಲ, ನೀರು ಮತ್ತು ಹಿಟ್ಟು ಸೇರಿಸಿ ಹಾಲನ್ನು ಕಲಬೆರಕೆ ಮಾಡುತ್ತಿರುವ ವಿಚಾರವೂ ಅಧಿಕಾರಿಗಳಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹಾಲು, ನೀರಿನ ಮಾದರಿ ಸಂಗ್ರಹಿಸಿ, ತಪಾಸಣೆಗೆ ಕಳುಹಿಸಲಾಗಿದೆ ಎಂದು ಎಫ್್ ಡಿಎ ಸಚಿವ ಗಿರೀಸ್ ಬಾಪಟ್ ತಿಳಿಸಿದ್ದಾರೆ.