ತಿರುವನಂತಪುರ: ದಕ್ಷಿಣ ಭಾರತದ ಜನಪ್ರಿಯ ನಟ ನಿವಿನ್ ಪೌಲಿಯೊಂದಿಗೆ ಫೋಟೋ ತೆಗೆಸಿಕೊಂಡು ಫೇಸ್ ಬುಕ್ ಗೆ ಹಾಕಿದ ಕಾರಣ ಕೇರಳದ ಮಹಿಳಾ ಎಸಿಪಿ ಮೆರೀನ್ ಜೋಸೆಫ್ ಎಂಬುವವರು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಎರ್ನಾಕುಲಂನ ಕಾಲೇಜೊಂದರ ಕಾರ್ಯಕ್ರಮಕ್ಕೆ ಮೆರೀನ್ ಜೋಸೆಫ್ ಹಾಗೂ ನಿವಿನ್ ಪೌಲಿ ಅವರು ಅತಿಥಿಗಳಾಗಿ ಹೋಗಿದ್ದಾರೆ. ಈವೇಳೆ ಇಬ್ಬರು ಜೊತೆಗಿರುವ ಫೋಟೋ ತೆಗೆಸಿಕೊಂಡಿದ್ದಾರೆ. ನಂತರ ಮೆರೀನ್ ಜೋಸೆಫೆ ತಮ್ಮ ಫೇಸ್ ಬುಕ್ ನಲ್ಲಿ ಈ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಈ ಫೋಟೋಗೆ ಫೇಸ್ ಬುಕ್ ನಲ್ಲಿ ಸಾಕಷ್ಟು ಲೈಕ್ಸ್ ಹಾಗೂ ಡಿಸ್ ಲೈಕ್ಸ್ ಗಳು ವ್ಯಕ್ತವಾಗಿದ್ದು, ಹಲವರು ಫೋಟೋ ನೋಡಿ ಸಮವಸ್ತ್ರ ಧರಿಸಿರುವ ಕರ್ತವ್ಯ ನಿರತ ಓರ್ವ ಪೊಲೀಸ್ ಅಧಿಕಾರಿ ತಮ್ಮ ಕರ್ತವ್ಯ ಮರೆತು ಫೋಟೋ ತೆಗೆಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆಂದು ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಕೇರಳದಾದ್ಯಂತ ಮೆರಿನ್ ಜೋಸೆಫ್ ಚರ್ಚೆಗೆ ಗ್ರಾಸವಾಗಿದ್ದು, ಅವರ ವಿರುದ್ಧ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.
ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೆರೀನ್ ಜೋಸೆಫ್, ಕಾಲೇಜಿನ ಕಾರ್ಯಕ್ರಮಕ್ಕೆ ಕೆಲಸದ ಮೇಲೆ ಹೋಗಿರಲಿಲ್ಲ. ಅತಿಥಿಯಾಗಿ ಹೋಗಲಾಗಿತ್ತು. ಕಾರ್ಯಕ್ರಮ ಪ್ರಾರಂಭವಾಗಲು ಬಹಳ ಸಮಯವಿತ್ತು. ಈ ವೇಳೆ ಗೃಹ ಸಚಿವರು ಹೊರಟು ಹೋಗಿದ್ದರು. ನಂತರ ಇನ್ನಿತರೆ ಅಧಿಕಾರಿಗಳು ಸಹ ವೇದಿಕೆಯಿಂದ ಕೆಳಗೆ ಇಳಿದುಬಂದಿದ್ದರು. ಕಾರ್ಯಕ್ರಮದಲ್ಲಿ ಅತಿಥಿಯಾದ್ದರಿಂದ ಯಾವುದೇ ಕೆಲಸವಿರಲಿಲ್ಲ. ಹಾಗಾಗಿ ನಟನೊಂದಿಗೆ ಫೋಟೋ ತೆಗಿಸಿಕೊಳ್ಳಲಾಯಿತು. ಬೇಡದ ವಿಷಯಗಳ ಬಗ್ಗೆ ಮಾಧ್ಯಮಗಳು ಹಚ್ಚು ಸುದ್ದಿ ಮಾಡುತ್ತಿವೆ. ನಟನೊಂದಿರುವ ಫೋಟೋ ತೆಗೆಯುವಂತೆ ಕಾಂಗ್ರೆಸ್ ನ ಕಾನೂನು ಸಚಿವರಾದ ಹಿಬಿ ಈಡೆನ್ ಅವರೊಂದಿಗೆ ಮನವಿ ಮಾಡಿಕೊಳ್ಳಲಾಯಿತು. ಹೀಗಾಗಿ ಅವರೇ ಈ ಫೋಟೋವನ್ನು ತೆಗೆದರು. ಈ ರೀತಿ ಫೋಟೋ ತೆಗೆಸಿಕೊಳ್ಳುವುದರಿಂದ ನನಗೆ ಯಾವುದೇ ಲಾಭವಿಲ್ಲ ಎಂದು ಹೇಳಿದ್ದಾರೆ.