ದೇಶ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಬದಲಿಸಲಾಗದು: ಹೈಕೋರ್ಟ್

Mainashree

ಶ್ರೀನಗರ: `ಜಮ್ಮು ಮತ್ತು ಕಾಶ್ಮೀರದ ಸಮಗ್ರತೆಯು ಕಾನೂನಾತ್ಮಕವಾಗಿ ಹಾಗೂ ಸಾಂವಿಧಾನಿಕವಾಗಿ ಅಖಂಡವಾಗಿಯೇ ಉಳಿಯಲಿದ್ದು, ಅದನ್ನು ಯಾರೂ ಪ್ರಶ್ನಿಸು ವಂತಿಲ್ಲ, ಬದಲಾಯಿಸುವಂತಿಲ್ಲ ಅಥವಾ ಕುಗ್ಗಿಸುವಂತಿಲ್ಲ'. ಇದು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು.

ವಿಶೇಷ ಸ್ಥಾನಮಾನ ಸಂಬಂಧ ಶನಿವಾರ ಮಹತ್ವದ ತೀರ್ಪು ಪ್ರಕಟಿಸಿರುವ ನ್ಯಾ. ಎಂ.ಎ.ಅತ್ತಾರ್ ಮತ್ತು ಎ.ಎಂ. ಮ್ಯಾಗ್ರೆ ಅವರನ್ನೊಳಗೊಂಡ ಪೀಠ, `2002ರಲ್ಲಿ ಸಂಸತ್‍ನಲ್ಲಿ ಅಂಗೀಕಾರ ಗೊಂಡ ಹಣಕಾಸು ಆಸ್ತಿಗಳ ಭದ್ರತೆ, ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿಯ ಜಾರಿ ಕಾಯ್ದೆಯನ್ನು ರಾಜ್ಯ ದಲ್ಲಿ ಅನುಷ್ಠಾನ ಮಾಡಲಾಗದು' ಎಂದು ಹೇಳಿದೆ.

ಕಾನೂನುಗಳನ್ನು ಮಾಡುವ ಸಂಸತ್‍ನ ಅಧಿಕಾರದ ವ್ಯಾಪ್ತಿಯಿಂದ ಜಮ್ಮು ಮತ್ತು ಕಾಶ್ಮೀರವನ್ನು ಹೊರಗಿಡಲಾಗಿದೆ. ರಾಜ್ಯ ಒಪ್ಪಿಗೆ ನೀಡಿದ ವಿಚಾರ ದಲ್ಲಿ ಮಾತ್ರವೇ ಸಂಸತ್ ಕಾನೂನು ರೂಪಿಸಬಹುದು. ಅದರಲ್ಲೂ ಈ ಕಾನೂನು ಸಂವಿಧಾನದ 370ನೇ ವಿಧಿಯಲ್ಲಿ ಉಲ್ಲೇಖಿಸಲಾದ ನಿಯಮಾವಳಿಗಳಿಗೆ ಒಳಪಟ್ಟಿರ ಬೇಕು ಎಂದೂ ತಿಳಿಸಿದೆ.

SCROLL FOR NEXT