ದೇಶ

ಲಖ್ವಿಯ ಧ್ವನಿ ಮಾದರಿಗಳನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ:ಎಫ್ ಐಎ

Sumana Upadhyaya

ಕರಾಚಿ: ಮುಂಬೈಯ 26/11 ರ ಭಯೋತ್ಪಾದಕ ದಾಳಿಯ ಆರೋಪಿ ಜಾಕಿರ್ ರೆಹಮಾನ್ ಲಖ್ವಿಯ ಧ್ವನಿ ಮಾದರಿಗಳನ್ನು ಸಾಕ್ಷಿಯನ್ನಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಾಲ್ಕು ವರ್ಷಗಳ ನಂತರ ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ(ಎಫ್ ಐಎ) ಕೊನೆಗೂ ಅರ್ಥಮಾಡಿಕೊಂಡಿದೆ.

ಕೇಸಿನ ವಿಚಾರಣೆ ನಡೆಸುತ್ತಿರುವ ಹಿರಿಯ ನ್ಯಾಯವಾದಿ, ತನಿಖೆಯ ಸಮಯದಲ್ಲಿ ಧ್ವನಿ ಮಾದರಿಯು ಸಹಾಯವಾಗಬಹುದು, ಆದರೆ ಭಾರತೀಯ ತನಿಖಾ ಸಂಸ್ಥೆ ರೆಕಾರ್ಡ್ ಮಾಡಿಕೊಂಡಿರುವ ಧ್ವನಿಯನ್ನು ಸಾಕ್ಷಿಯನ್ನಾಗಿ ಬಳಸಲು ಸಾಧ್ಯವಾಗುವುದಿಲ್ಲ.ಧ್ವನಿಯ ನಿಖರತೆಯನ್ನು ಸಾಬೀತುಪಡಿಸುವ ಯಾವುದೇ ಕಾನೂನು ಇಲ್ಲ ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

ಈಗ ಇರುವ ಕಾನೂನಿನ ಪ್ರಕಾರ, ವಿದ್ಯುನ್ಮಾನ ಸಾಕ್ಷಗಳನ್ನು ಬಳಸಲು ಅವಕಾಶವಿದೆ. ಆದರೆ, ಆರೋಪಿಗೆ ಧ್ವನಿ ಮಾದರಿಯನ್ನು ನ್ಯಾಯಾಲಯಕ್ಕೆ ನೀಡಲು ಅವಕಾಶಗಳಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಪಾಕಿಸ್ತಾನದ ಫೆಡರಲ್ ತನಿಖಾ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಲಖ್ವಿಯ ಧ್ವನಿ ಮಾದರಿ ನೀಡಲು ಒತ್ತಾಯಿಸುತ್ತಿತ್ತು.

ಮೊನ್ನೆ ಪ್ರಧಾನಿ ನರೇಂದ್ರ ಮೋದಿಯವರ ಉಫಾ ಸಭೆಯ ಸಂದರ್ಭದಲ್ಲಿ ಭಾರತ ಲಖ್ವಿಯ ವಿಚಾರಣೆಯ ವರದಿಯನ್ನು ನೀಡಿದ್ದರೆ, ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್, ವಿಚಾರಣೆಯನ್ನು ಮುಗಿಸಲು ಪಾಕಿಸ್ತಾನಕ್ಕೆ ಹೆಚ್ಚಿನ ಮಾಹಿತಿ ಮತ್ತು ಸಾಕ್ಷ್ಯಗಳು ಬೇಕಾಗಿವೆ ಎಂದು ಹೇಳಿದ್ದರು.

SCROLL FOR NEXT