ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಜೆಕೆಸಿಎ ಅಧ್ಯಕ್ಷ ಸ್ಥಾನದಿಂದ ಫಾರೂಕ್ ಅಬ್ದುಲಾ ಉಚ್ಚಾಟನೆಗೆ ಕೋರ್ಟ್ ತಡೆ

ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಫಾರೂಕ್ ಅಬ್ದುಲಾ ಉಚ್ಚಾಟನೆಗೆ ಜಮ್ಮು-ಕಾಶ್ಮೀರ ಹೈಕೋರ್ಟ್ ತಡೆ ನೀಡಿದೆ.

ಫಾರೂಕ್ ಅಬ್ದುಲ್ಲಾ(ಸಂಗ್ರಹ ಚಿತ್ರ)
Srinivas Rao BV
Updated On : 20 Jul 2015, 4:10 am

ಶ್ರೀನಗರ: ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಫಾರೂಕ್ ಅಬ್ದುಲ್ಲಾ ಉಚ್ಚಾಟನೆಗೆ ಜಮ್ಮು-ಕಾಶ್ಮೀರ ಹೈಕೋರ್ಟ್ ತಡೆ ನೀಡಿದೆ.

ಹೈಕೋರ್ಟ್ ತಡೆ ನೀಡಿರುವುದರಿಂದ ಫಾರೂಕ್ ಅಬ್ದುಲ್ಲಾ ಜೆಕೆಸಿಎಯ ಅಧ್ಯಕ್ಷ ಸ್ಥಾನದಲೇ ಮುಂದುವರೆಯಲಿದ್ದಾರೆ. ಇಂದು ನಡೆದ ಆಂತರಿಕ ಚುನಾವಣೆಯಲ್ಲಿ ಅಬ್ದುಲ್ಲಾ ಅವರನ್ನು ಅಧ್ಯಕ್ಷ ಸ್ಥನಾದಿಂದ ಉಚ್ಚಾಟಿಸಿ ಜಮ್ಮು-ಕಾಶ್ಮೀರದ ಕ್ರೀಡಾ ಸಚಿವ ಇಮ್ರಾನ್ ರಾಜಾ ಅನ್ಸಾರಿ ಅವರನ್ನು ಅವಿರೋಧವಾಗಿ ನೇಮಕ ಮಾಡಲಾಗಿತ್ತು.
ತಮ್ಮ ಅವಧಿ ಇನ್ನೂ 3 ವರ್ಷ ಬಾಕಿ ಇದೆ. ಆದ್ದರಿಂದ ಈಗ ತಮ್ಮನ್ನು  ಉಚ್ಚಾಟನೆ ಮಾಡಿರುವುದು ಅಕ್ರಮ ಎಂದು ಆರೋಪಿಸಿದ್ದ ಫಾರುಕ್ ಅಬ್ದುಲ್ಲಾ ತಡೆ ನೀದಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಫಾರೂಕ್ ಅಬ್ದುಲಾ ಉಚ್ಚಾಟನೆಗೆ ತಡೆ ನೀಡಲಾಗಿದೆ. 64 ಅಂಗಸಂಸ್ಥೆಗಳ ಪೈಕಿ ಚುನಾವಣೆಯಲ್ಲಿ ಭಾಗವಹಿಸಿದ್ದ 42 ಅಂಗಸಂಸ್ಥೆಗಳು ಫಾರೂಕ್ ಅಬ್ದುಲಾ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement