ಸಂಗ್ರಹ ಚಿತ್ರ 
ದೇಶ

ದೇವಾಲಯದ ಮುಂದೆ ಹಣದ ಮಳೆ ಸುರಿಸಿದ ಕೋತಿ

ಪ್ರವಾಸಕ್ಕೆಂದು ತೆರಳಿದ ಮಹಿಳೆಯ ಪರ್ಸ್ ಕಸಿದುಕೊಂಡ ಕೋತಿ ಮಾಡಿದ್ದೇನು ಗೊತ್ತಾ?...

ಆಗ್ರಾ: ಪ್ರವಾಸಕ್ಕೆಂದು ತೆರಳಿದ ಮಹಿಳೆಯ ಪರ್ಸ್ ಕಸಿದುಕೊಂಡ ಕೋತಿ ಮಾಡಿದ್ದೇನು ಗೊತ್ತಾ? ಪರ್ಸ್ ನಲ್ಲಿದ್ದ 1.5 ಲಕ್ಷ ಹಣವನ್ನು ಎರಚಾಡಿದೆ.

ಹೌದು, ಮುಂಬೈನ ಬೊರಿವಿಲಿಯಿಂದ ಆಗ್ರಾ, ಮಥುರಾ ಹಾಗೂ ಬೃಂದಾವನ ವೀಕ್ಷಿಸಲು ಆಗಮಿಸಿದ್ದ ಕುಟುಂಬವೊಂದರ ಮಹಿಳೆ ಬಳಿ ಇದ್ದ ಬ್ಯಾಗನ್ನು ಬಂಕಿ ಬಿಹಾರಿ ದೇವಾಲಯದ ಬಳಿ ಇದ್ದ ಕೋತಿಯೊಂದು ಕಸಿದಿದೆ. ನಂತರ ಅದರಲ್ಲಿದ್ದ ರು.500 ಮುಖ ಬೆಲೆಯ ಸುಮಾರು ರು. 1.50 ಲಕ್ಷವನ್ನು ಒಂದೊಂದಾಗಿ ಎಸೆದಿದೆ. ಈ ರೀತಿ ಮೇಲಿಂದ ಹಣ ಬೀಳುತ್ತಿದ್ದಂತೆ ಅಲ್ಲಿ ದೇವರ ದರ್ಶನಕ್ಕೆ ಆಗಮಿಸಿದ್ದ ಕೆಲ ಭಕ್ತಾದಿಗಳು ಹಾಗೂ ದೇವಾಲಯದ ಬಳಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಭಿಕ್ಷುಕರು ಬಿಟ್ರೆ ಸಿಗಲ್ಲ ಎಂಬಂತೆ ನೋಟುಗಳನ್ನು ಆಯ್ದುಕೊಂಡಿದ್ದಾರೆ.

ಕೆಲವರು ಕ್ಷಣಾರ್ಧದಲ್ಲೇ ನಾಲ್ಕೈದು ಸಾವಿರ ರೂ. ಗಳನ್ನು ಸಂಗ್ರಹಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ತಮ್ಮ ಬಳಿ ಇದ್ದ ಲಕ್ಷಾಂತರ ರುಪಾಯಿ ಅನ್ಯಾಯವಾಗಿ ಬೇರೆಯವರ ಪಾಲಾಗುತ್ತಿರುವುದನ್ನು ಕಂಡರೂ, ಹಣ ಕಳೆದುಕೊಂಡವರು ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು.

ವೃಂದಾವನದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇಲ್ಲಿರುವ ಮಂಗಗಳು ಅಲ್ಲಿ ಬರುವಂತಹ ಪ್ರವಾಸಿಗರ ಬಳಿ ಇರುವ ಸನ್ ಗ್ಲಾಸ್, ಕ್ಯಾಮೆರಾ, ಫೋನ್ ಸೇರಿದಂತೆ ವಿವಿಧ ಬೆಲೆಯುಳ್ಳ ವಸ್ತುಗಳನ್ನು ಕಸಿದು ಪರಾರಿಯಾಗುತ್ತವೆ. ಕಳೆದ ಬಾರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಇದೇ ರೀತಿ ಕೋತಿ ಹಾವಳಿಯಿಂದಾಗಿ 75 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಪ್ರಣಬ್ ಮುಖರ್ಜಿ ಅವರು ಎಚ್ಚರಿಸಿದ್ದರು.

ಇಂತಹ ಘಟನೆಗಳು ತಮ್ಮ ಗಮನಕ್ಕೆ ಬಂದಿದೆ ಎಂದಿರುವ ಅಲ್ಲಿನ ಸ್ಥಳೀಯ ಪೊಲೀಸರು, ಈ ಘಟನೆ ಬಗ್ಗೆ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Geneva ಸಭೆಯಲ್ಲಿ ಭಾರತದ ವಿರುದ್ಧ ಟೀಕೆ; ‘ರಾಜಕೀಯ ಪ್ರೇರಿತ ಹೇಳಿಕೆಗಳ ಒಪ್ಪಲ್ಲ’ ಎಂದ MEA, ವಿಶ್ವಸಂಸ್ಥೆ ಸಮಿತಿ ವಿರುದ್ಧ ಕಿಡಿ..!

'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು? ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!

ದೇಶಾದ್ಯಂತ H1N1 ಪ್ರಕರಣಗಳ ಏರಿಕೆ: ಸೋಂಕಿನ ಲಕ್ಷಣಗಳು, ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, IMA ಸಲಹೆ ಏನು?

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

'ಟಾಕ್ಸಿಕ್' ಸಿನಿಮಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸದಂತೆ ಕೋರ್ಟ್ ತಡೆಯಾಜ್ಞೆ!