ಬೀಜಿಂಗ್: ಮೂರು ತಾಸುಗಳಲ್ಲಿ ಒಂದು ಸಣ್ಣ ಕೊಠಡಿ ನಿರ್ಮಾಣವೂ ಸಾಧ್ಯವಿಲ್ಲ. ಅಂಥದರಲ್ಲಿ ಚೀನಾ ಮೂರೇ ಗಂಟೆಗಳಲ್ಲಿ 2 -ಸ್ಟೋರಿ ವಿಲ್ಲಾ ನಿರ್ಮಾಣ ಮಾಡಿ ತೋರಿಸಿದೆ. ಅದೂ ಸಕಸ ವ್ಯವಸ್ಥೆಯೊಂದಿಗೆ.
ಉತ್ತರ ಚೀನಾದ ಶಾಂಕ್ಷಿ ನಗರದ ನಿರ್ಮಾಣ ಸಂಸ್ಥೆಯೊಂದು ಇಂಥ ಸಾಹಸ ಮೆರೆದಿದೆ. ಮೂರು ಗಂಟೆಗಳ ಅವಧಿಯಲ್ಲಿ ಒಳಾಂಗಣ ವಿನ್ಯಾಸ, ಕೊಳವೆಗಳ ಜೋಡಣೆ, ವೈರಿಂಗ್ ಮುಂತಾದ ಎಲ್ಲ ವ್ಯವಸ್ಥೆಗಳನ್ನೂ ಒಳಗೊಂಡ ಅದ್ಭುತ ವಿಲ್ಲಾ ಒಂದನ್ನು ನಿರ್ಮಾಣ ಮಾಡಿದೆ.
ಹಾಲ್, ಮಲಗುವ ಕೊಠಡಿ, ಅಡುಗೆ ಕೋಣೆ, ಬಚ್ಚಲು ಮನೆ ಹೀಗೆ ಮನೆಯ ಭಾಗಗಳನ್ನ 3 ಡಿ ಪ್ರಿಂಟರ್ ಮೂಲಕ ಸಿದ್ಧಪಡಿಸಿ ಶಾಂಕ್ಷಿ ಪ್ರಾಂತ್ಯದ ಕ್ಷಿಯಾನ್ಗೆ ಹೊತ್ತು ತಂದ ಎಂಜಿನಿಯರ್ ಗಳು ನೋಡುನೋಡುತ್ತಲೇ ಎಲ್ಲಾ ಭಾಗಗಳನ್ನು ಜೋಡಿಸಿ ಸುಂದರ ವಿಲ್ಲಾ ನಿರ್ಮಿಸಿದರು.