ದೇಶ

ಕಳೆದ 7 ವರ್ಷಗಳಲ್ಲಿ 228 ಸಿ.ಆರ್.ಪಿ.ಎಫ್ ಯೋಧರ ಆತ್ಮಹತ್ಯೆ!

Srinivas Rao BV

ನವದೆಹಲಿ: ಕಳೆದ ಏಳು ವರ್ಷದಲ್ಲಿ 228 ಸಿ.ಆರ್.ಪಿ.ಎಫ್ ಯೋಧರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿ ಮೂಲಕ ಬಹಿರಂಗವಾಗಿದೆ.

ವೈವಾಹಿಕ ಜೀವನದಲ್ಲಿ ಬಿರುಕು, ವೈಯಕ್ತಿಕ ದ್ವೇಷ, ಖಿನ್ನತೆ, ಮಾನಸಿಕ ವ್ಯಾಧಿ ಸೇರಿದಂತೆ ವಯಕ್ತಿಕ ಹಾಗೂ ಕೌಟುಂಬಿಕ ಸಮಸ್ಯೆಗಳಿಂದಾಗಿ ಬೇಸತ್ತು ಯೋಧರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಅತಿ ಕಡಿಮೆ ಪ್ರಮಾಣದಲ್ಲಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ತಿಳಿಸಿದ್ದಾರೆ.

2008 -2014 ರ ಅವಧಿಯಲ್ಲಿ ಅತಿ ಹೆಚ್ಚು ಸಿ.ಆರ್.ಪಿ.ಎಫ್ ಯೋಧರು ಮೃತಪಟ್ಟಿದ್ದಾರೆ. ವಿವಿಧ ಶ್ರೇಣಿಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರಿದ್ದು, ಮಾನಸಿಕ ಒತ್ತಡ, ಖಿನ್ನತೆ ಕಡಿಮೆಯಾಗಲು ಯೋಗ ಮಾಡುವಂತೆ ಎಲ್ಲಾ ಯೋಧರಿಗೂ ಸಲಹೆ ನೀಡಲಾಗಿದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ.
ಇನ್ನು ಈ ಅಂಕಿ ಅಂಶಗಳು ಹೊರಬೀಳುವುದಕ್ಕೆ ಮುನ್ನವೂ ಸಹ ಕಾಶ್ಮೀರದ ಬಾರಮುಲ್ಲ ಪ್ರಾಂತ್ಯದಲ್ಲಿ ಓರ್ವ ಸಿ.ಆರ್.ಪಿ.ಎಫ್ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಈ ವರೆಗೂ ತಿಳಿದುಬಂದಿಲ್ಲ.

SCROLL FOR NEXT