ದೇಶ

ಅಬ್ದುಲ್ ಕಲಾಂ ಫೋಟೊಗೆ ಪುಷ್ಪ ನಮನ: ತೀವ್ರ ಟೀಕೆಗೊಳಗಾದ ಜಾರ್ಖಂಡ್ ಶಿಕ್ಷಣ ಸಚಿವೆ ನಡೆ

Srinivas Rao BV

ಜಾರ್ಖಂಡ್: ಮೃತ ವ್ಯಕ್ತಿಗಳ ಫೋಟೊಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸುವುದು ವಾಡಿಕೆ. ಬದುಕಿರುವ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವರ ಫೋಟೋಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸುವ ಪದ್ಧತಿ ಚಾಲ್ತಿಯಲ್ಲಿರುವುದನ್ನು ಕಂಡಿಲ್ಲ ಅಲ್ಲವೇ? ಆದರೆ ಜಾರ್ಖಂಡ್ ಶಿಕ್ಷಣ ಸಚಿವೆಯೊಬ್ಬರು ಶಾಲಾ ಕಾರ್ಯಕ್ರಮವೊಂದರಲ್ಲಿ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಮೃತರ ಫೋಟೊಗೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಆದರೆ ಬಿಜೆಪಿಯ ಸಚಿವೆ ನೀರಾ ಯಾದವ್ ಅಬ್ದುಲ್ ಕಲಾಮ್ ಅವರ ಫೋಟೊಗೆ ಹಾರ ಹಾಕಿ ಗೌರವ ಸಲ್ಲಿಸಿರುವುದು ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ. ಸಚಿವರಷ್ಟೇ ಅಲ್ಲದೇ ಬಿಜೆಪಿಯ ಶಾಸಕರು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಸಹ ಅಬ್ದುಲ್ ಕಲಾಮ್ ಅವರ ಫೋಟೊಗೆ ಪೂಜೆ ಸಲ್ಲಿಸಿದ್ದಾರೆ.  

ಜಾರ್ಖಂಡ್ ನ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕಾರ್ಯಕ್ರಮ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ. ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕುವ ಮೂಲಕ ಉದ್ಘಾಟನೆ ಮಾಡಲಾಗಿದೆ. ಇದನ್ನು ಸಚಿವರು ಸಮರ್ಥಿಸಿಕೊಂಡಿದ್ದು ಶ್ರೇಷ್ಠ ನಾಯಕರು ಬದುಕಿರುವಾಗಲೂ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ ಸಚಿವರ ನಡೆಗೆ ಟೀಕೆಗೆ ಗುರಿಯಾಗುತ್ತಿದೆ.

SCROLL FOR NEXT