ದೇಶ

ಮಕ್ಕಳಿಗೆ ದ್ವಿಪೌರತ್ವ ಕೋರಿ ದೇವಯಾನಿ ಕೋಬ್ರಾಗಡೆ ಸಲ್ಲಿಸಿದ್ದ ಅರ್ಜಿ ವಜಾ

Shilpa D

ನವದೆಹಲಿ: ಐಎಫ್ ಎಸ್ ಅಧಿಕಾರಿ ದೇವಯಾನಿ ಕೋಬ್ರಾಗಡೆ ತಮ್ಮ ಇಬ್ಬರು ಪುತ್ರಿಯರಿಗೆ ದ್ವಿ ಪೌರತ್ವ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿದೆ.

 ಅಮೇರಿಕಾ ರಾಷ್ಟ್ರೀಯತೆ ಪಡೆದಿರುವ ದೇವಯಾನಿ ಕೋಬ್ರಾಗಡೆಯ ಇಬ್ಬರು ಮಕ್ಕಳಿಗೆ ಭಾರತೀಯ ಪೌರತ್ವ ನೀಡಲು ದೇಶದ ಕಾನೂನಿನಲ್ಲಿ ಅವಕಾಶವಿಲ್ಲ ಎಂದು  ಗೃಹ ಸಚಿವಾಲಯ ಹೇಳಿದೆ.

ಅಮೇರಿಕಾದಲ್ಲಿ ಭಾರತೀಯ ಕೌನ್ಸುಲ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದ ದೇವಯಾನಿ ಕೋಬ್ರಾಗಡೆ ಅವರನ್ನು ವೀಸಾ ವಂಚನೆ ಆರೋಪದ ಮೇಲೆ 2013 ರಲ್ಲಿ ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದರು. ದೇವಯಾನಿ ಕೋಬ್ರಾಗಡೆ ಅವರ ಇಬ್ಬರು ಪುತ್ರಿಯರು ದ್ವಿ ಪೌರತ್ವ ಪಡೆಯಲು ಅರ್ಹರಲ್ಲ. ಹೀಗಾಗಿ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ವಿದೇಶದಲ್ಲಿ ಜನಿಸಿ ಅಲ್ಲಿಯ ಪೌರತ್ವ ಪಡೆದು ನಂತರ ಭಾರತೀಯ ಪೌರತ್ವ ಬಯಸಿದರೇ ಅಂಥವರಿಗೆ ಮಾತ್ರ ನೀಡಲಾಗುತ್ತದೆ. ಆದರೆ ದೇವಯಾನಿ ಅವರ ಮಕ್ಕಳು ಮುಂಬಯಿಯಲ್ಲಿ ಜನಿಸಿದ್ದು , ದೇವಯಾನಿ ಅವರ ಪತಿ ಅಮೇರಿಕಾ ಪ್ರಜೆಯಾಗಿದ್ದಾರೆ. ಹೀಗಾಗಿ ಅವರ ಮಕ್ಕಳಿಗೆ ಅಮೇರಿಕಾ ಪೌರತ್ವ ಸಿಕ್ಕಿದೆ. ಭಾರತೀಯ ಪೌರತ್ವ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ,  ಅವರಿಗೆ ದ್ವಿ ಪೌರತ್ವ ನೀಡಲಾಗುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.  

SCROLL FOR NEXT