ತಿರುಪತಿ ದೇವಾಲಯ 
ದೇಶ

ಮತ್ತೊಂದು ತಿರುಪತಿ ಮಾದರಿ ದೇವಾಲಯ ನಿರ್ಮಿಸಲು ಹೊರಟಿದ್ದಾರಾ ತೆಲಂಗಾಣ ಸಿಎಂ?

ಆಂಧ್ರ ಪ್ರದೇಶ ವಿಭಜನೆ ನಂತರ ತೆಲಂಗಾಣ ಮತ್ತು ಆಂದ್ರಪ್ರದೇಶಗಳಲ್ಲಿ ದೇವಾಲಯ ಅಭಿವೃದ್ಧಿ ಸಮರ ಆರಂಭವಾಗಿದೆ...

ಹೈದರಾಬಾದ್: ಆಂಧ್ರ ಪ್ರದೇಶ ವಿಭಜನೆ ನಂತರ ತೆಲಂಗಾಣ ಮತ್ತು ಆಂದ್ರಪ್ರದೇಶಗಳಲ್ಲಿ ದೇವಾಲಯ ಅಭಿವೃದ್ಧಿ ಸಮರ ಆರಂಭವಾಗಿದೆ.  ಕಳೆದ ವರ್ಷ ಆಂಧ್ರ ತೆಲಂಗಾಣವಾಗಿ ವಿಭಜನೆಯಾದ ನಂತರ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ,  ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಾಗೂ ಚಿತ್ತೂರಿನ ಕಾಳಹಸ್ತಿ ದೇವಾಲಯಗಳ ಉಸ್ತುವಾರಿಯನ್ನು ಚಂದ್ರಬಾಬು ನಾಯ್ಡು ಸರ್ಕಾರ ನೋಡಿಕೊಳ್ಳುತ್ತಿದೆ.

ತೆಲಂಗಾಣದಲ್ಲೂ ಹಲವು ದೇವಾಲಯಗಳಿದ್ದೂ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೊಳಿಸಿ ಭಕ್ತಾಧಿಗಳನ್ನು ಆಕರ್ಷಿಸಲು ಚಂದ್ರಶೇಖರ್ ರಾವ್ ಸರ್ಕಾರ ಮುಂದಾಗಿದೆ. ದೇಶದ ಅತೀ ಶ್ರೀಮಂತ ದೇವರು ಎನಿಸಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಯಾದಗಿರಿಗುಟ್ಟದಲ್ಲಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ನಿರ್ಮಿಸಲು ತೆಲಂಗಾಣ ಸರ್ಕಾರ  ಯೋಜನೆ ಸಿದ್ಧ ಪಡಿಸಿದೆ.

ಕಳೆದ ವರ್ಷ ಯಾದಗಿರಿಗುಟ್ಟವನ್ನು ಪ್ರಸಿದ್ಧ ಯಾತ್ರಾ ಸ್ಥಳವಾಗಿ ಅಭಿವೃದ್ಧಿಗೊಳಿಸುವುದಾಗಿ ಕೆ. ಚಂದ್ರ ಶೇಖರ್ ರಾವ್ ಘೋಷಣೆ ಮಾಡಿದ ನಂತರ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಿದೆ. ಹೈದರಾಬಾದ್ ನಿಂದ ಕೇವಲ 50 ಕಿಮೀ ದೂರದಲ್ಲಿರುವ ಯಾದಗಿರಿಗುಟ್ಟಕ್ಕೆ ಬಸ್ ಮತ್ತು ರೈಲು ಸಂಚಾರ ಸೌಲಭ್ಯ ಹೇರಳವಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತಗಣ ಬರುವ ನಿರೀಕ್ಷೆ ಹೊಂದಲಾಗಿದೆ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!