ದೇಶ

ಹೋಮ್ ವರ್ಕ್ ಮಾಡದಿದ್ದಕ್ಕೆ ಮಂಡಿಯೂರಿ ನಿಲ್ಲುವ ಶಿಕ್ಷೆ: ವಿದ್ಯಾರ್ಥಿನಿ ಸಾವು

Srinivas Rao BV

ಕರೀಂನಗರ: ಹೋಮ್ ವರ್ಕ್ ಮಾಡದೇ ಶಾಲೆಗೇ ಬಂದಿದ್ದರಿಂದ ಮಂಡಿಯೂರಿ ನಿಲ್ಲುವ ಶಿಕ್ಷೆಗೊಳಗಾಗಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ತೆಲಂಗಾಣದ ವಿವೇಕವರ್ಧಿನಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತಾ ಎಂಬ ವಿದ್ಯಾರ್ಥಿನಿ ಹೋಮ್ ವರ್ಕ್ ಮಾಡದೇ ಬಂದಿದ್ದರಿಂದ ಅರ್ಧ ಗಂಟೆ ಕಾಲ ಮಂಡಿಯೂರಿ ನಿಲುವಂತೆ ಗಣಿತದ ಶಿಕ್ಷಕಿ  ವಿದ್ಯಾರ್ಥಿನಿಗೆ  ಶಿಕ್ಷೆ ನೀಡಿದ್ದಾರೆ.

ಇದರಿಂದ ತೊಡೆ ಮತ್ತು ಮಂಡಿಯಲ್ಲಿ ತೀವ್ರ ನೋವುಂಟಾಗಿದ್ದು ಈ ವಿಷಯವನ್ನು ಹರ್ಷಿತಾ ಪೋಷಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಕೂಡಲೇ ವಿದ್ಯಾರ್ಥಿನಿಯನ್ನು ವಾರಂಗಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಅರ್ಧಗಂಟೆ ಕಾಲ ಮಂಡಿಯೂರಿ ನಿಂತಿದ್ದಕ್ಕೆ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಹರ್ಷಿತಾ ಚಿಕಿತ್ಸೆ ಪಡೆಯುತ್ತಿರುವಾಗಲೆ ಸಾವನ್ನಪ್ಪಿದ್ದಾಳೆ. ಆಘಾತಗೊಂಡಿರುವ ಪೋಷಕರು ಮೃತದೇಹವನ್ನು ಶಾಲೆಯ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಶಾಲೆಯ  ವಿದ್ಯಾರ್ಥಿಗಳೂ  ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನೆಯಲ್ಲಿ ಭಾವಹಿಸಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

SCROLL FOR NEXT