ಪಾನಮತ್ತ ಕುದುರೆ(ಸಂಗ್ರಹ ಚಿತ್ರ) 
ದೇಶ

ಮದುಮಗನನ್ನು ಅನಾಮತ್ ಕೆಳಕ್ಕೆ ದೂಡಿದ ಪಾನಮತ್ತ ಕುದುರೆ

ಭಾರತೀಯರು ಸಾಂಪ್ರದಾಯಿಕವಾಗಿ ಮದುಮಗನನ್ನು ಕುದುರೆಯ ಮೇಲೆ ಕುಳಿಸಿ ದಿಬ್ಬಣಕ್ಕೆ ಕರೆದುಕೊಂಡು ಹೋಗುವುದು ಒಂದು ಪದ್ಧತಿ...

ಒಟ್ಟಾವ(ಕೆನಡಾ): ಭಾರತೀಯರು ಸಾಂಪ್ರದಾಯಿಕವಾಗಿ ಮದುಮಗನನ್ನು ಕುದುರೆಯ ಮೇಲೆ ಕುಳಿಸಿ ದಿಬ್ಬಣಕ್ಕೆ ಕರೆದುಕೊಂಡು ಹೋಗುವುದು ಒಂದು ಪದ್ಧತಿ. ಅದರಂತೆ ಕೆನಡಾದ ಒಟ್ಟಾವನಲ್ಲಿ ಸಿಖ್ ಸಂಪ್ರದಾಯಸ್ಥರು ವರನನ್ನು ಸಿಂಗರಿಸಿ ಪದ್ಧತಿಯಂತೆ ಕುದುರೆ ಮೇಲೆ ಕುಳಿಸಿದಾಗ ಅದು ವಾಯುವೇಗದಲ್ಲಿ ಓಡಿ ವರನನ್ನು ಕೆಳಕ್ಕೆ ದೂಡಿದೆ.

ಬ್ರಿಟಿಷ್ ಕೊಲಂಬಿಯಾದ ಸುರ್ರೆಯೇ ನಗರದಲ್ಲಿ ಮದುವೆ ದಿಬ್ಬಣಕ್ಕೆ ಹೋಗುವಾಗ ಈ ಘಟನೆ ನಡೆದಿದೆ. ಕುದುರೆ ಮೇಲಿದ್ದ ವರ ಅದರ ಆರ್ಭಟಕ್ಕೆ ಕಂಗಾಲಾಗಿ ಆತನ ಜಂಘಾಬಲವೇ ಉಡುಗಿ ಹೋಗಿತ್ತು. ಹಾಗು ಹೀಗೂ ಸ್ವಲ್ಪ ಸಮಯ ಕುದುರೆಯನ್ನು ಸುಧಾರಿಸಿದ ವರ ಅದರ ವೇಗಕ್ಕೆ ತತ್ತರಿಸಿ ಕೆಳಕ್ಕೆ ಬಿದ್ದಿದ್ದಾನೆ.

ಮದುಮಗನನ್ನು ಕುದುರೆ ಮೇಲೆ ಕುಳಿಸಿದಾಗ ಕುದುರೆ ಗರ ಗರನೇ ತಿರುಗಿದೆ. ಇದು ಸಾಮಾನ್ಯವೆಂದು ಕುದುರೆ ಮಾಲೀಕ ಅದನ್ನು ಪಳಗಿಸಿ ಬಿಟ್ಟು ಬಿಟ್ಟರು. ಆದರೆ ಅಮಲೇರಿದ್ದ ಕುದುರೆ ಒಂದೇ ಓಟಕ್ಕೆ ಮದುಮಗ ತನ್ನ ಶಾಲು ಹಾಗೂ ಪೇಟಾದೊಂದಿಗೆ ನೆಲಕ್ಕುರುಳಿದ್ದು ಸಂಬಂಧಿಕರು ಆತನ ಸಹಾಯಕ್ಕೆ ಧಾವಿಸಿದ್ದರು. ಕುದುರೆಗೆ ಯಾರೋ ಮತ್ತು ಬರಿಸುವ ಅಮಲು ಪದಾರ್ಥ ಕುಡಿಸಿದ್ದರು ಎಂದು ಮಾಧ್ಯಮದ ವರದಿ ತಿಳಿಸಿದೆ. ಅಂತೂ ಮದುಮಗ ಯಾವುದೇ ಪ್ರಾಣಾಪಾಯ ಸಂಭವಿಸದೆ ಪಾರಾಗಿರುವ ವೀಡಿಯೋ ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ.

ಈ ಕುದುರೆಯನ್ನು ಹಲವಾರು ಮದುವೆ ಸಮಾರಂಭದಲ್ಲಿ ಉಪಯೋಗಿಸಲಾಗಿದ್ದು ಯಾವತ್ತೂ ಹೀಗಾಗಿರಲಿಲ್ಲ. ಇವತ್ತು ಏನಾಯ್ತು ಅಂತ ಗೊತ್ತಿಲ್ಲ' ಎಂದು ಕುದುರೆ ಮಾಲೀಕ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಹಫಿಂಗ್ ಟನ್ ಫೋಸ್ಟ್ ಎಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video