ಸಾಂದರ್ಭಿಕ ಚಿತ್ರ 
ದೇಶ

ದ್ವೇಷಮಯ ಮಾಹಿತಿ ತಡೆಯಲು 49 ವೆಬ್‍ಸೈಟ್‍ಗಳಿಗೆ ತಡೆ

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಪೂರಿತ ಮಾಹಿತಿ ಪ್ರಸಾರ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ, 40 ವೆಬ್‍ಸೈಟ್‍ಗಳನ್ನು ಬ್ಲಾಕ್ ಮಾಡಲು ನಿರ್ಧರಿಸಿದೆ...

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಪೂರಿತ ಮಾಹಿತಿ ಪ್ರಸಾರ ಮಾಡುವುದನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ, 40 ವೆಬ್‍ಸೈಟ್‍ಗಳನ್ನು ಬ್ಲಾಕ್  ಮಾಡಲು ನಿರ್ಧರಿಸಿದೆ.
ಅವುಗಳು ಸಮಾಜದ ಹಿತಕ್ಕೆ ಧಕ್ಕೆ ತರುವಂಥ ಮಾಹಿತಿಗಳನ್ನು ಮತ್ತು ವಿಡಿಯೋಗಳನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಜೂ.29ರಂದೇ ಮಾಹಿತಿ ತಂತ್ರಜ್ಞಾನ ಇಲಾಖೆ ಆದೇಶ ಹೊರಡಿಸಿದೆ. ಎಲ್ಲ ಇಂಟರ್‍ನೆಟ್ ಸೇವಾ ಪೂರೈಕೆದಾರರಿಗೆ ಕೂಡ ಸರ್ಕಾರ ಆದೇಶಿಸಿದೆ. ಭಯೋತ್ಪಾದಕರು ಮುಸ್ಲಿಂ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡು ಪ್ರಚೋದನಾಕಾರಿ ಯಾಗಿರುವ ಮಾಹಿತಿ, ವಿಡಿಯೋಗಳನ್ನು ಜಾಲ ತಾಣಗಳಲ್ಲಿ ಅಪ್‍ಲೋಡ್ ಮಾಡಲು ಮುಂದಾಗಿವೆ. ಅದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಕೆಲವೊಂದು ಮಾಹಿತಿ ಈಗಲೂ  ಸಿಗುತ್ತಿದೆ.
ಅವುಗಳನ್ನೂ ತೆಗೆದು ಹಾಕುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದರ ಜತೆಗೆ ದೂರಸಂಪರ್ಕ ಇಲಾಖೆ ಜು.9ರಂದು ಆದೇಶ ಹೊರಡಿಸಿದ್ದು,  ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷಮಯ ಮಾಹಿತಿ, ಪೋಸ್ಟ್ ಮತ್ತು ವಿಡಿಂಯೋಗಳನ್ನು ನಿಯಂತ್ರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಇಂಟರ್‍ನೆಟ್ ಸೇವಾ ಪೂರೈಕೆದಾರರಿಗೆ ತಾಕೀತು  ಮಾಡಿದೆ.
ವೆಬ್‍ಸೈಟ್ ಮರುವಿನ್ಯಾಸ: ಶೀಘ್ರದಲ್ಲೇ ದೇಶದ ಎಲ್ಲ ಸರ್ಕಾರಿ ವೆಬ್‍ಸೈಟ್‍ಗಳು ಅಂಗವೈಕಲ್ಯವಿರುವ ವ್ಯಕ್ತಿಗಳಿಗೂ ಸುಲಭವಾಗಿ ಬಳಸಲು ಸಾಧ್ಯವಾಗುವಂತೆ ವಿನ್ಯಾಸಗೊಳ್ಳಲಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸುಮಾರು 6 ಸಾವಿರ ವೆಬ್‍ಸೈಟ್‍ಗಳಲ್ಲಿ ಕನಿಷ್ಠ ಶೇ.50ರಷ್ಟನ್ನು ಮುಂದಿನ ಜುಲೈ ಹೊತ್ತಿಗೆ ಸಂಪೂರ್ಣವಾಗಿ ವಿಕಲಚೇತನರ ಬಳಕೆಗೆ ಸಲೀಸಾಗುವಂತೆ  ಮಾರ್ಪಡಿಸುವುದಾಗಿ ಸಾಮಾಜಿಕ ನ್ಯಾಯ ಇಲಾಖೆ ತಿಳಿಸಿದೆ. ಈ ಬಗ್ಗೆ ಇಲಾಖೆ ಅರ್ನೆಟ್ ಇಂಡಿಯಾಗೆ ಪತ್ರ ಬರೆದಿದ್ದು ಸದ್ಯದಲ್ಲೇ ಕಾರ್ಯ ಆರಂಭವಾಗಲಿದೆ.ಇದೇ ವೇಳೆ ಅಂಗವಿಕಲರ  ಸಬಲೀಕರಣ ಇಲಾಖೆಯ ವೆಬ್ ಸೈಟ್ ಕೂಡ ಕೆಲದಿನಗಳಲ್ಲೇ ಪ್ರಾರಂಭವಾಗುವುದಾಗಿ ಕಚೇರಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!