ದಿಗಂಬರ ಕಾಮತ್ 
ದೇಶ

ಅಮೆರಿಕದ ಸಂಸ್ಥೆಯಿಂದ 1 ಕೋಟಿ ಲಂಚ ಪಡೆದ ಮಾಜಿ ಗೋವಾ ಸಿಎಂ

ಅಂತಾರಾಷ್ಟ್ರೀಯ ಖ್ಯಾತಿಯ ಅಮೆರಿಕದ ನ್ಯೂಜೆರ್ಸಿ ಮೂಲದ ನಿರ್ಮಾಣ ಸಂಸ್ಥೆ 'ಲೂಯಿಸ್ ಬರ್ಗರ್' ಗೋವಾದ ಮಾಜಿ...

ಪಣಜಿ: ಅಂತಾರಾಷ್ಟ್ರೀಯ ಖ್ಯಾತಿಯ ಅಮೆರಿಕದ ನ್ಯೂಜೆರ್ಸಿ ಮೂಲದ ನಿರ್ಮಾಣ ಸಂಸ್ಥೆ 'ಲೂಯಿಸ್ ಬರ್ಗರ್' ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರಿಗೆ 1 ಕೋಟಿ ಲಂಚ ನೀಡಿದೆ ಎಂದು ಗೋವಾ ಕ್ರೈಂ ಬ್ರಾಂಚ್ ಹೇಳಿದೆ.

'ಲೂಯಿಸ್ ಬರ್ಗರ್' ಸಂಸ್ಥೆ ಗೋವಾ ಮಂತ್ರಿಗಳಿಗೆ ಲಂಚಾ ನೀಡಿರುವ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಗೋವಾ ಕ್ರೈಂ ಬ್ರಾಂಚ್ ಮಂಗಳವಾರ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದು, ಗೋವಾ ಮತ್ತು ಅಸ್ಸಾಂನ ಎರಡು ಬೃಹತ್ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗಳ ಗುತ್ತಿಗೆ ನೀಡಲು  'ಲೂಯಿಸ್ ಬರ್ಗರ್' ಸಂಸ್ಥೆಯಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ದಿಗಂಬರ್ 1 ಕೋಟಿ ಲಂಚ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಈ ಲಂಚ ವ್ಯವಹಾರ 2010-2011 ನಡುವೆ ನಡೆದಿದ್ದು, ಲೂಯಿಸ್ ಬರ್ಗರ್ ಅಧಿಕಾರಿಗಳು ರು.1 ಕೋಟಿಗೂ ಹೆಚ್ಚು ಹಣವನ್ನು ನೀಡಿದ್ದಾರೆ. ಅಲ್ಲದೇ ಮಾಜಿ ಪಿಡಬ್ಲೂಡಿ ಸಚಿವ ಚರ್ಚಿಲ್ ಅಲೆಮಾವೋ ಅವರು ಕೂಡ ರು.70 ಲಕ್ಷ ಲಂಚ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.
ಸೆಕ್ಷನ್ 164 ಸಿಆರ್ ಪಿಸಿ ಅಡಿಯಲ್ಲಿ ಲೂಯಿಸ್ ಬರ್ಗರ್ ಸಂಸ್ಥೆಯ ಇಬ್ಬರು ಮಾಜಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ತಮ್ಮ ಅಧಿಕೃತ ನಿವಾಸದಲ್ಲಿ ಈ ಇಬ್ಬರು ಮಂತ್ರಿಗಳಿಗೆ ಲಂಚ ನೀಡಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

SCROLL FOR NEXT