ದೇಶ

ಜನಪ್ರಿಯ ವ್ಯಕ್ತಿಗಳ ಅಂಚೆ ಚೀಟಿ ಬಿಡುಗಡೆ: ಸರ್ಕಾರ

Sumana Upadhyaya

ನವದೆಹಲಿ: ದೇಶದ ಪ್ರಖ್ಯಾತ ಸಂಗೀತಗಾರರು, ಬರಹಗಾರರು, ಸ್ವಾತಂತ್ರ್ಯ ಹೋರಾಟಗಾರರು, ಚಿತ್ರಕಾರರ ಹೆಸರಿನಲ್ಲಿ ಸರಣಿ ಅಂಚೆಚೀಟಿಗಳನ್ನು ಹೊರತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಂಚೆಚೀಟಿಗಳ ಸಂಗ್ರಹ ಸಲಹಾ ಸಮಿತಿ, ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಇದುವರೆಗೆ ಸರ್ಕಾರ ಸಾಂದರ್ಭಿಕ ಅಂಚೆಚೀಟಿಗಳನ್ನು ಮಾತ್ರ ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಪೋಸ್ಟ್ ಕಾರ್ಡ್ ಅಳತೆಯಲ್ಲಿ ದೇಶದ ಪ್ರಮುಖ ಪ್ರವಾಸಿ ತಾಣಗಳಾದ ತಾಜ್ ಮಹಲ್, ಅಜಂತಾ-ಎಲ್ಲೋರಾ, ಬೇಲೂರು ಮಠ, ಕಜುರಾಹೋಗಳ ಚಿತ್ರಗಳಿರುವ ಅಂಚೆ ಚೀಟಿಗಳನ್ನು ಸಹ ತರಲಿದೆ.ಅಂಚೆ ಚೀಟಿ ವಿನ್ಯಾಸ ಕಾರ್ಯವನ್ನು ಗುತ್ತಿಗೆ ನೀಡಲಿದೆ.

ಈ ವರ್ಷ ಜನವರಿ 15ರಂದು ಕ್ಲೀನ್ ಇಂಡಿಯಾ ಧ್ಯೇಯದಡಿ, ಸ್ವಚ್ಛ ಭಾರತ ಅಂಚೆ ಚೀಟಿಯನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿತ್ತು. ಅದೇ ರೀತಿ ನಾಡಿದ್ದು, ಸ್ವತಂತ್ರ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟ ಅಂಚೆಚೀಟಿಯನ್ನು ಇಲಾಖೆ ಹೊರತರಲಿದೆ.

SCROLL FOR NEXT