ದೇಶ

ಇಬ್ಬರು ಭಾರತೀಯರಿಗೆ ಮ್ಯಾಗ್ಸೆಸೆ ಪ್ರಶಸ್ತಿ

Guruprasad Narayana

ನವದೆಹಲಿ: ಸಾಮಾಜಿಕ ಕಾರ್ಯಕರ್ತ ಅನುಷ್ ಗುಪ್ತಾ ಮತ್ತು ಮಾಜಿ ಏಮ್ಸ್ ಮಾಜಿ ವೈದ್ಯಾಧಿಕಾರಿ ಸಂಜೀವ್ ಚತುರ್ವೇದಿ ಅವರಿಗೆ ಕ್ರಮವಾಗಿ ನಾಯಕತ್ವದ ಅಭಿವೃದ್ಧಿಗೆ ಹಾಗು ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ ಬುಧವಾರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಗುಪ್ತಾ ಅವರು ಬಡ ಜನರ ಅಭಿವೃದ್ಧಿಗೆ ಬಟ್ಟೆಯ ಅಗತ್ಯತೆಯನ್ನು ಮನಗಂಡು ಅದರ ನಿಟ್ಟಿನಲ್ಲಿ ಉದ್ದಿಮೆಯ ನಾಯಕತ್ವಕ್ಕಾಗಿ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಸಂಸ್ಥೆ ತಿಳಿಸಿದೆ.

ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಸಾರ್ವಜನಿಕ ಕಚೇರಿಯಲ್ಲಿನ ಭ್ರಷ್ಟಾಚಾರವನ್ನು ಹೆದರದೆ ಬಯಲು ಮಾಡಿದ್ದನ್ನು ಗುರುತಿಸಿ ಚತುರ್ವೇದಿ ಅವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

SCROLL FOR NEXT