ದೇಶ

ಯಾಕೂಬ್ ಮೆಮನ್ ಕ್ಷಮಾದಾನ ಅರ್ಜಿ: ರಾಷ್ಟಪತಿಯನ್ನು ಭೇಟಿ ಮಾಡಿದ ಗೃಹ ಸಚಿವ ರಾಜನಾಥ್ ಸಿಂಗ್

Srinivas Rao BV

ನವದೆಹಲಿ: 1993 ಮುಂಬೈ ಬಾಂಬ್ ಸ್ಪೋಟದ ಅಪರಾಧಿ ಯಾಕುಬ್ ಮೆಮನ್ ಗೆ ಗಲ್ಲು ಶಿಕ್ಷೆ ವಿಧಿಸುವ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದಾರೆ.

ಕ್ಷಮಾದಾನಕ್ಕೆ ಯಾಕೂಬ್ ಮೆಮನ್ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿರುವ ರಾಜನಾಥ್ ಸಿಂಗ್ ಗಲ್ಲು ಶಿಕ್ಷೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ರಾಜನಾಥ್ ಸಿಂಗ್ ಭೇಟಿ ಕುತೂಹಲ ಮೂಡಿಸಿದ್ದು ಗಲ್ಲು ಶಿಕ್ಷೆ ಬಗ್ಗೆ ರಾಷ್ಟ್ರಪತಿ ಕೈಗೊಳ್ಳಲಿರುವ ನಿರ್ಣಯ ಅಂತಿಮವಾಗಿರಲಿದೆ.

ಮತ್ತೊಂದೆಡೆ ಮೆಮನ್ ಇರುವ ನಾಗಪುರ ಜೈಲಿನ 500 ಮಿ.ಪ್ರದೇಶದಲ್ಲಿ ಸೆಕ್ಷನ್ 144 (ನಿಷೇದಾಜ್ಞೆ) ಜಾರಿ ಮಾಡಲಾಗಿದೆ. ಆಂಬುಲೆನ್ಸ್ ಹಾಗೂ ಗಲ್ಲಿಗೇರಿಸುವುದಕ್ಕೂ ಮುನ್ನ ಮೆಮನ್ ಆರೋಗ್ಯ ತಪಾಸಣೆ ನಡೆಸುವ ಸಂದರ್ಭದಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳನ್ನು ನಾಗಪುರ ಜೈಲಿಗೆ ತಲುಪಿವೆ. ಕ್ಷಮಾದಾನ ಕೋರಿ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಅರ್ಜಿ ಈ ವರೆಗೂ ಗೃಹಸಚಿವಾಲಯದಲ್ಲಿಯೇ ಉಳಿದಿತ್ತು.

SCROLL FOR NEXT