ಯಾಕೂಬ್ ಮೆಮನ್ ಅಂತ್ಯಕ್ರಿಯೆ 
ದೇಶ

ಚಂದನ್ ವಾಡಿ ಯಲ್ಲಿ ನಡೆದ ಯಾಕೂಬ್ ಮೆಮೆನ್ ಅಂತ್ಯಕ್ರಿಯೆ

ಜು.30 ರ ಬೆಳಿಗ್ಗೆ ನೇಣುಗಂಬಕ್ಕೆ ಏರಿಸಲಾದ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ನ ಅಂತ್ಯಕ್ರಿಯೆ ಸ್ಮಶಾನ ಭೂಮಿಯಲ್ಲಿ ನಡೆದಿದೆ.

ಮುಂಬೈ: ಜು.30 ರ ಬೆಳಿಗ್ಗೆ ನೇಣುಗಂಬಕ್ಕೆ ಏರಿಸಲಾದ ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ನ ಅಂತ್ಯಕ್ರಿಯೆ ನಾಗ್ಪುರದ ಬಡಾ ಕಾಬ್ರಿಸ್ತಾನ ರಸ್ತೆಯಲ್ಲಿರುವ ಚಂದನ್ ವಾಡಿ ಸ್ಮಶಾನ ಭೂಮಿಯಲ್ಲಿ ನಡೆದಿದೆ.

ಯಾಕೂಬ್ ನನ್ನು ಗಲ್ಲಿಗೇರಿಸಿದ ನಂತರ, ಕುಟುಂಬ ಅಂತಿಮ ವಿಧಿಗಳನ್ನು ಮುಂಬೈನಲ್ಲಿ ನೆರವೇರಿಸಲು ಕಠಿಣ ಷರತ್ತುಳನ್ನು ವಿಧಿಸಿ ಅವಕಾಶ ನಿಡಲಾಗಿತ್ತು.  ಶವವನ್ನು ಮುಂಬೈ ನಲ್ಲಿರುವ ಯಾಕೂಬ್ ಮೆಮನ್ ನ ಮಾಹಿಮ್ ನಿವಾಸಕ್ಕೆ ತರಲಾಯಿತು. ಪ್ರಾಥನೆಗಳ ನಂತರ ಕಾಬ್ರಿಸ್ತಾನ ರಸ್ತೆಯಲ್ಲಿರುವ ಚಂದನ್ ವಾಡಿ ಸ್ಮಶಾನ ಭೂಮಿಯಲ್ಲಿ ಯಾಕೂಬ್ ಅಂತ್ಯಕ್ರಿಯೆ ನಡೆದಿದೆ.

ಜೈಲು ಅಧಿಕಾರಿಗಳು ಕುಟುಂಬ ವಶಕ್ಕೆ ನೀಡದೆ ಜೈಲಿನ ಆವರಣದಲ್ಲೇ ಅಂತಿಮ ವಿಧಿಯನ್ನು ನಡೆಸಲು ನಿರ್ಧರಿಸಿದ್ದರು. ಆದರೆ ಯಾಕೂಬ್ ನನ್ನು ಗಲ್ಲಿಗೇರಿಸಿದ ನಂತರ, ಕುಟುಂಬ ಅಂತಿಮ ವಿಧಿಗಳನ್ನು ಮುಂಬೈನಲ್ಲಿ ನೆರವೇರಿಸಲು ಅನುವು ಮಾಡಿಕೊಡಲು ದೇಹವನ್ನು ವಶಕ್ಕೆ ನೀಡುವಂತೆ  ಮೆಮನ್ ಸಹೋದರ ಸುಲೈಮಾನ್ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಕಠಿಣ ಷರತ್ತುಗಳೊಂದಿಗೆ ಅನುಮತಿ ನೀಡಿ ದೇಹವನ್ನು ವಶಕ್ಕೆ ನೀಡಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!

Passport Fees Increases: ದೇಶದ ಜನತೆಗೆ ಕೇಂದ್ರದಿಂದ ಮತ್ತೊಂದು ಶಾಕ್! ಪಾಸ್ ಪೋರ್ಟ್ ಶುಲ್ಕ ಹೆಚ್ಚಳ, ಜು. 1 ರಿಂದ ಹೊಸ ದರಗಳು ಜಾರಿಗೆ

PWD ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆಯಲ್ಲಿ 13 ಕೋಟಿ ಮೌಲ್ಯದ ಆಸ್ತಿ ಪತ್ತೆ!

ಕಲಬುರಗಿಯಲ್ಲಿ ಮನಕಲಕುವ ಘಟನೆ: ಒಂದೂವರೆ ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಗರ್ಭಿಣಿ ಆತ್ಮಹತ್ಯೆ!

ಪ್ರಧಾನಿ ಮೋದಿ ಭೇಟಿ ಮಾಡಿದ Amazon CEO; ಭಾರತದಲ್ಲಿ ಹೆಚ್ಚುವರಿಯಾಗಿ 13 ಬಿಲಿಯನ್ ಡಾಲರ್ ಹೂಡಿಕೆ