ಕಾಬೂಲ್: ಭಯೋತ್ಪಾದಕ ಸಂಘಟನೆ ತಾಲಿಬಾನ್‌ನ ನಾಯಕನಾಗಿದ್ದ ಮುಲ್ಲಾ ಒಮರ್ ಸಾವಿನ ಸುದ್ದಿ ಖಚಿತವಾದ ಒಂದು ದಿನದ ನಂತರ ತಾಲಿಬಾನ್ ಸಂಘಟನೆ ತನ್ನ ನೂತನ ನಾಯಕನ ನೇಮಕ ಮಾಡಿದೆ.
ಭಯೋತ್ಪಾದಕ ಸಂಘಟನೆ ತಾಲಿಬಾನ್‌ನ ನೂತನ ನಾಯಕನಾಗಿ ಮುಲ್ಲಾ ಅಖ್ತರ್ ಮನ್ಸೂರ್ ನೇಮಕ ಪ್ರಕಟಣೆ ಹೊರಬಿದ್ದಿದೆ.
ಸಂಘಟನೆಯ ವಿಭಜಿತ ಗುಂಪಿನ ನಾಯಕನಾಗಿದ್ದ ಮುಲ್ಲಾ ಒಮರ್, ಆಫ್ಘಾನಿಸ್ತಾನದಲ್ಲಿ ಸುಮಾರು 20 ವರ್ಷಗಳ ಯುದ್ಧಕ್ಕೆ ಕಾರಣವಾಗಿದ್ದ. ಒಮರ್‌ನ ಕಟ್ಟಾ ಬೆಂಬಲಿಗನಾಗಿ ಮನ್ಸೂರ್ ಸಂಘಟನೆಯ ಉಪನಾಯಕನಾಗಿದ್ದ. ಸಂಘಟನೆಯಲ್ಲಿ ಆಂತರಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಹೊಸ ಜವಾಬ್ದಾರಿ ಸ್ವೀಕರಿಸಿದ್ದಾರೆ.
ನೂತನ ನಾಯಕನ ಆಯ್ಕೆ ಸಂಬಂಧ ತಾಲಿಬಾನ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಒಮರ್ ಸಾವಿನ ನಂತರ ನಾಯಕತ್ವ ಪರಿಷತ್ ಹಾಗೂ ದೇಶದ ಇಸ್ಲಾಮಿಕ್ ಬುದ್ಧಿಜೀವಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಮನ್ಸೂರ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಉಗ್ರಸಂಘಟನೆ ಹೇಳಿದೆ.