ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮೊಹಮ್ಮದ್ ಫಾರೂಕ್ (ಸಂಗ್ರಹ ಚಿತ್ರ) 
ದೇಶ

ಗಲ್ಲಿಗೇರಿದ ಮೆಮನ್ ಪತ್ನಿಯನ್ನು ರಾಜ್ಯಸಭಾ ಸದಸ್ಯೆಯಾಗಿಸಿ: ಮೊಹಮ್ಮದ್ ಫಾರೂಕ್

1993ರ ಮುಂಬೈ ಸರಣಿ ಸ್ಪೋಟದ ರುವಾರಿ ಉಗ್ರ ಯಾಕುಬ್ ಮೆಮನ್ ಪತ್ನಿ ರಹೀನಾ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕೆಂದು ಹೇಳಿ ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮೊಹಮ್ಮದ್ ಫಾರೂಕ್ ಘೋಸಿ ಶನಿವಾರ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ...

ನವದೆಹಲಿ: 1993ರ ಮುಂಬೈ ಸರಣಿ ಸ್ಪೋಟದ ರುವಾರಿ ಉಗ್ರ ಯಾಕುಬ್ ಮೆಮನ್ ಪತ್ನಿ ರಹೀನಾ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕೆಂದು ಹೇಳಿ ಮಹಾರಾಷ್ಟ್ರ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಮೊಹಮ್ಮದ್ ಫಾರೂಕ್ ಘೋಸಿ ಶನಿವಾರ ಮುಲಾಯಂ ಸಿಂಗ್ ಯಾದವ್ ಅವರಿಗೆ ಪತ್ರ ಬರೆದಿದ್ದಾರೆ.

ಮೊಹಮ್ಮದ್ ಫಾರೂಕ್ ಘೋಸಿ ಬರೆದಿರುವ ಪತ್ರವೀಗ ವಿವಾದಕ್ಕೆ ಕಾರಣವಾಗಿದ್ದು, ಪತ್ರದಲ್ಲಿ ಯಾಕುಬ್ ಜೈಲಿಗೆ ಸೇರಿದಾಗಿನಿಂದ ಆತನ ಪತ್ನಿ ರಹೀನಾ ಹಲವು ವರ್ಷಗಳಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಇದೀಗ ಯಾಕುಬ್ ನನ್ನು ಗಲ್ಲಿಗೇರಿಸಲಾಗಿದ್ದು, ಆಕೆಗೆ ಸರ್ಕಾರದ ಸಹಾಯದ ಅಗತ್ಯವಿದೆ. ರಹೀನಾಳಂತೆಯೇ ಇನ್ನು ಸಾಕಷ್ಟು ಮಂದಿ ಮುಸ್ಲಿಂಮರು ಸಂಕಷ್ಟದಲ್ಲೇ ಈಗಲೂ ಕಾಲ ಕಳೆಯುತ್ತಿದ್ದು, ಅಸಹಾಯಕ ಮುಸ್ಲಿಂಮರನ್ನು ಪ್ರತಿನಿಧಿಸಲು ರಹೀನಾರನ್ನು ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಈ ರೀತಿಯ ಪತ್ರವನ್ನು ಪಕ್ಷದ ಮುಖ್ಯಸ್ಥರಿಗೆ ಬರೆಯುವುದು ಸರಿಯಲ್ಲ ಹಾಗೂ ಪತ್ರ ಬರೆಯಲು ಇದು ಸರಿಯಾದ ಸಮಯವಲ್ಲ ಎಂದು ನನಗೆ ತಿಳಿದಿದೆ. ಆದರೆ, ರಹೀನಾ ಅವರ ಕಷ್ಟ ನೋಡುತ್ತಿದ್ದರೆ ಪತ್ರ ಬರೆಯಲೇಬೇಕಾಗಿ ಬಂತು. ಅಸಹಾಯಕರಿಗೆ ನೀವು ಯಾವಾಗಲೂ ಸಹಾಯ ಹಸ್ತ ನೀಡುತ್ತೀರಿ. ಹೀಗಾಗಿ ರಹೀನಾ ಕೂಡ ಇದೀಗ ಅಸಹಾಯಕ ಹೆಣ್ಣುಮಗಳಾಗಿದ್ದು, ಅವರಿಗೆ ಸಹಾಯ ಮಾಡಬೇಕೆಂದು ಮೊಹಮ್ಮದ್ ಫಾರೂಕ್ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT