ಯಾಕೂಬ್ ಮೆಮನ್ 
ದೇಶ

ದೇಶದ್ರೋಹಿ ಯಾಕೂಬ್ ನನ್ನು ಮಹಾತ್ಮನಂತೆ ಚಿತ್ರಿಸಿದ ಉರ್ದು ಪತ್ರಿಕೆಗಳು

1993 ರ ಮುಂಬಯಿ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಹಲವು ಉರ್ದು ಪತ್ರಿಕೆಗಳು ಪರೋಕ್ಷವಾಗಿ...

ನವದೆಹಲಿ: 1993 ರ ಮುಂಬಯಿ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಹಲವು ಉರ್ದು ಪತ್ರಿಕೆಗಳು ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿವೆ.

ಉರ್ದು ಪತ್ರಿಕೆಗಳಲ್ಲಿ ಯಾಕೂಬ್ ಮೆಮನ್ ಬಗ್ಗೆ ಸಹಾನುಭೂತಿ ಲೇಖನಗಳನ್ನು ಬರೆದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಯಾಕೂಬ್ ಮೆಮನ್ ಒಬ್ಬ ಸಜ್ಜನ, ಆತನ್ನು ಗಲ್ಲಿಗೇರಿಸಬಾರದಿತ್ತು ಎಂಬ ರೀತಿ ಅಭಿಪ್ರಾಯ ವ್ಯಕ್ತ ಪಡಿಸಿವೆ.

ಇಂಕ್ವಿಲಾಬ್ ಎಂಬ ಉರ್ದು ಪತ್ರಿಕೆಯ ಸಂಪಾದಕೀಯದಲ್ಲಿ, ಯಾರದ್ದೋ ಸಂಚಿಗೆ ಯಾಕೂಬ್ ಮೆಮನ್ ಬಲಿಪಶು ಎಂಬಂತೆ ಬರೆಯಲಾಗಿದೆ. ಸ್ಫೋಟದ ಮಾಸ್ಟರ್  ಮೈಂಡ್ ನನ್ನು ಹಿಡಿಯಲು ಸೆಕ್ಟೂರಿಟಿ ಏಜೆನ್ಸಿಗಳಿಗೆ ಸಾಧ್ಯವಾಗಲಿಲ್ಲ. ನಿಜವಾದ ತಪ್ಪಿತಸ್ಥರನ್ನು ಹಿಡಯುವ ಕನಿಷ್ಠ ಪ್ರಯತ್ನವನ್ನೂ ಮಾಡದ ತನಿಕಾ ತಂಡ ಯಾಕೂಬ್ ಮೆಮನ್ ನನ್ನು ಬಲಿ ಕಾ ಬಕ್ರಾ ಮಾಡಿ ಮೆಮನ್ ಗೆ ಅನ್ಯಾಯವಾಗಿದೆ ಎಂದು ತನ್ನ ಸಂಪಾದಕೀಯದಲ್ಲಿ ಹೇಳಿದೆ.

ಅಕ್ಬರ್-ಇ ಮಾಶ್ರಿಕ್ ಎಂಬ ಪತ್ರಿಕೆಯಲ್ಲಿ ಯಾಕೂಬ್ ಶರಣಾಗತಿಯ ಬಗ್ಗೆ ಅಗತ್ಯವಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಲು ಆಡಳಿತ ವರ್ಗ ವಿಫಲವಾಗಿದೆ ಎಂದು ಹೇಳಿದೆ. ಸುಪ್ರಿಂಕೋರ್ಟ್ ಯಾಕೂಬ್ ಮೇಲ್ಮನವಿ ಅರ್ಜಿಯನ್ನು ಮಧ್ಯರಾತ್ರಿ ವಿಚಾರಣೆ ನಡೆಸಿತು. ಈ ವೇಳೆ ಯಾಕೂಬ್ ತನ್ನ ಗಲ್ಲು ಶಿಕ್ಷೆಗೆ ತಡೆ ಬೀಳಬಹುದೆಂಬ ಆಸೆಯಲ್ಲಿ ರಾತ್ರಿಯೆಲ್ಲಾ ನಿದ್ದೆ ಮಾಡದೇ ಕಾಯುತ್ತಿದ್ದ. ಆದರೆ ಕೊನೆಗೂ ಅವನ ಹಣೆಬರಹ ಬದಲಾಗಲೇ ಇಲ್ಲ ಎಂದು ಹೇಳಿದೆ.

ಯಾಕೂಬ್ ಗಲ್ಲು ಶಿಕ್ಷೆಯ ಇಡೀ ದೇಶದ ಅರ್ಧ ಜನತೆ ರಾತ್ರಿಯಿಡಿ ನಿದ್ದೆ ಮಾಡದೇ ಯಾಕೂಬ್ ಮೆಮನ್ ಗಾಗಿ ಪರಿತಪಿಸುತ್ತಿತ್ತು ಎಂದು ರೋಜ್ನಾಮಾ ಸಹಾಪತ್ ಎಂಬ ಪತ್ರಿಕೆ ಬರೆದಿದೆ. ದಕ್ಷಿಣ ಮುಂಬಯಿಯ ಬಡಾ ಕಬರಿಸ್ತಾನ್ ಸ್ಮಶಾನದಲ್ಲಿ  ಸಾಗರೋಪಾದಿಯಲ್ಲಿ ಲಕ್ಷಾಂತರ ಜನರು ಯಾಕೂಬ್ ಮೆಮನ್ ಗಾಗಿ ಜಮಾಯಿಸಿದ್ದರು. ಆತನ ಮನೆ ಪೊಲೀಸ್ ಸರ್ಪಗಾವಲಿನಿಂದ ಕೂಡಿತ್ತು ಎಂದು ಹೇಳಿದೆ.

ಯಾಕೂಬ್ ಮೆಮನ್ ಅಂತ್ಯ ಸಂಸ್ಕಾರದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದು. ಇಂತಹ ಜನಸ್ತೋಮವನ್ನು ಹಿಂದೆಂದೂ ಕಂಡಿರಲಿಲ್ಲ ಎಂದು ಹಮಾರಾ ಸಮಾಜ್ ವರದಿ ಮಾಡಿದೆ. ಇನ್ನು ಉರ್ದು ಪತ್ರಕರ್ತರೆಲ್ಲಾ ಸೇರಿ ಯಾಕೂಬ್ ಮೆಮನ್ ಗಲ್ಲು ಶಿಕ್ಷೆ ಸಂಬಂಧ ದೇಶದ ಅತ್ಯುನ್ನತ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಆತನಿಗೆ ನ್ಯಾಯ ದೊರಕಿಸಿಕೊಡಲು ಮನವಿ ಮಾಡಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT