ದೇಶ

ಅಕ್ರಮ ಪರವಾನಗಿ ನೀಡಿದ್ದ ಎ. ರಾಜಾ

Vishwanath S

ನವದೆಹಲಿ: ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರು ಅನರ್ಹ ವ್ಯಾಪಾರ ಸಂಸ್ಥೆಗಳಿಗೆ ಅಕ್ರಮವಾಗಿ ಪರವಾನಗಿಯನ್ನು ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ
(ಇಡಿ) ತಿಳಿಸಿದೆ.

ರು.200 ಕೋಟಿಯನ್ನು ಡಿಎಂಕೆ ನಾಯಕ ಎಂ ಕರುಣಾನಿಧಿ ಮಾಲೀಕತ್ವದ ಕಲೈನಾರ್ ಟಿವಿಗೆ ವರ್ಗಾಯಿಸಲಾಗಿತ್ತು. 2ಜಿ  ತರಂಗಾಂತರ ಹಂಚಿಕೆ ಹಗರಣದ ವಿಚಾರಣೆ ಆರಂಭವಾದಾಗ, ರಾಜಾ ಹಾಗೂ ಇತರ ಆರೋಪಿಗಳು ರೂಪಿಸಿದ ಪಿತೂರಿ ಹಾಗೂ ರು.200 ಕೋಟಿಯು ಅಪರಾಧದ ಮುಂದುವರಿದ ಭಾಗ ಇದು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆನಂದ್ ಗ್ರೋವರ್ ಆಪಾದಿಸಿದ್ದಾರೆ.

ಕಲೈನಾರ್ ಟಿವಿಗೆ ವಿವಿಧ ಸಂಸ್ಥೆಗಳಿಂದ ವರ್ಗಾವಣೆಯಾದ ಹಣವು, 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ರಾಜಾ ಅವರನ್ನು ಸಿಬಿಐ ವಿಚಾರಣೆಗೆ ಕರೆದಾಗ ಮಾತ್ರ ವಾಪಸ್ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

SCROLL FOR NEXT