ಪ್ರಧಾನಿ ನರೇಂದ್ರ ಮೋದಿ 
ದೇಶ

ಪ್ರಧಾನಿ ಮೋದಿ ಸದಸ್ಯತ್ವ ಅನರ್ಹಗೊಳಿಸಿ: ಕಾಂಗ್ರೆಸ್

ಲೋಕಸಭಾ ಚುನಾವಣೆಯ ಖರ್ಚುವೆಚ್ಚದ ವಿವರ ನೀಡುವಲ್ಲಿ ವಿಫಲರಾದ ನರೇಂದ್ರ ಮೋದಿ ಅವರು ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಎಐಸಿಸಿ ಕಾನೂನು ಘಟಕದ ಕಾರ್ಯದರ್ಶಿ ಕೆಸಿ ಮಿತ್ತಲ್...

ನವದೆಹಲಿ: ಲೋಕಸಭಾ ಚುನಾವಣೆಯ ಖರ್ಚುವೆಚ್ಚದ ವಿವರ ನೀಡುವಲ್ಲಿ ವಿಫಲರಾದ ನರೇಂದ್ರ ಮೋದಿ ಅವರು ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಎಐಸಿಸಿ ಕಾನೂನು ಘಟಕದ ಕಾರ್ಯದರ್ಶಿ ಕೆಸಿ ಮಿತ್ತಲ್ ಹೇಳಿದ್ದಾರೆ.

ವಾರಾಣಸಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ವೆಚ್ಚದ ಸರಿಯಾದ ಹಾಗೂ ನಿಜವಾದ ವಿವರಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಚುನಾವಣಾ ನೀತಿ-ಸಂಹಿತೆ ಉಲ್ಲಂಘನೆಯಾಗಿದೆ. ಆದ್ದರಿಂದ ಮೋದಿಯವರ ಸಂಸತ್  ಸದಸ್ಯತ್ವ ಅನರ್ಹಗೊಳಿಸಬೇಕು ಎಂದು ಎಐಸಿಸಿ ಕಾನೂನು ಘಟಕದ ಕಾರ್ಯದರ್ಶಿ ಕೆಸಿ ಮಿತ್ತಲ್ ತಮ್ಮ ಪಕ್ಷದ ಸದಸ್ಯರ ಪರವಾಗಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ದೂರು ಪಡೆದಿರುವ ಆಯೋಗ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದೆ. ಚುನಾವಣೆ ಕಚೇರಿಯಾಗಿ 14 ಅಂತಸ್ತುಗಳ ಕಟ್ಟಡವನ್ನು ಬಾಡಿಗೆ ಹಿಡಿದಿದ್ದಲ್ಲದೆ, ಕಚೇರಿಯ ನವೀಕರಣಕ್ಕೆ 2 ಕೋಟಿ ವೆಚ್ಚಮಾಡಿದ್ದಾರೆ ಎಂದು ಮಿತ್ತಲ್ ದೂರಿದ್ದಾರೆ. ಆರೆಸ್ಸೆಸ್ ಮೋದಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ ಖರ್ಚಿನ ಲೆಕ್ಕವನ್ನೂ ಕೇಳಿರುವ ಕಾಂಗ್ರೆಸ್, ಮೋದಿಯ ಪ್ರಯಾಣವೆಚ್ಚಗಳನ್ನೂ ನೀಡಬೇಕು ಎಂದು ಒತ್ತಾಯಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!