ಪೌಲ್ ಬುಲ್ಕೆ 
ದೇಶ

ಮ್ಯಾಗಿಯಲ್ಲಿ ಎಂಎಸ್‌ಜಿ ಇಲ್ಲ: ನೆಸ್ಲೆ ಸಿಇಒ ಪೌಲ್ ಸ್ಪಷ್ಟನೆ

ತೀವ್ರ ವಿವಾದಕ್ಕೆ ಕಾರಣವಾಗಿರುವ ಮ್ಯಾಗಿ ನೂಡಲ್ಸ್‌ನಲ್ಲಿ ಮೋನೋಸೋಡಿಯಂ ಗ್ಲುಟಮೇಟ್(ಎಂಎಸ್‌ಜಿ) ಇಲ್ಲ ಎಂದು ನೆಸ್ಲೆ ಕಂಪನಿಯ ಜಾಗತಿಕ....

ನವದೆಹಲಿ: ತೀವ್ರ ವಿವಾದಕ್ಕೆ ಕಾರಣವಾಗಿರುವ ಮ್ಯಾಗಿ ನೂಡಲ್ಸ್‌ನಲ್ಲಿ ಮೋನೋಸೋಡಿಯಂ ಗ್ಲುಟಮೇಟ್(ಎಂಎಸ್‌ಜಿ) ಇಲ್ಲ ಎಂದು ನೆಸ್ಲೆ ಕಂಪನಿಯ ಜಾಗತಿಕ ಸಿಇಒ ಪೌಲ್ ಬುಲ್ಕೆ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪೌಲ್, ನಮಗೆ ಜಗತ್ತಿನ ಎಲ್ಲಾ ಗ್ರಾಹಕರ ಹಿತಾಸಕ್ತಿಯೇ ಮುಖ್ಯ. ಸುರಕ್ಷತೆ ಹಾಗೂ ಗುಣಮಟ್ಟಕ್ಕೆ ನಮ್ಮ ಮೊದಲ ಆದ್ಯತೆಯಾಗಿದ್ದು, ಗ್ರಾಹಕರನ್ನು ಗನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದಾರೆ.

ಭಾರತ ಸೇರಿ ಹಲವು ಕಡೆ ನಾವು ಗುಣಮಟ್ಟ ಕಾಯ್ದುಕೊಂಡಿದ್ದೇವೆ. ನಮ್ಮ ಕಂಪನಿಯ ಮ್ಯಾಗಿ ಬಳಕೆಗೆ ಯೋಗ್ಯವಾಗಿದೆ. ಹೀಗಾಗಿಯೇ ಮ್ಯಾಗಿ 30 ವರ್ಷಗಳಿಂದ ನಂಬಿಕೆಯ ತಿನಿಸಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಗಳಿಂದ ಗೊಂದಲಗಳು ಸೃಷ್ಟಿಯಾಗಿವೆ. ಇದರಿಂದ ಗ್ರಾಹಕರು ನಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ವಿಶ್ವಾಸ ಗಳಿಸುವವರೆ ಮ್ಯಾಗಿ ಉತ್ಪನ್ನವನ್ನು ಹಿಂಪಡೆಯುವುದಾಗಿ ಪೌಲ್ ತಿಳಿಸಿದ್ದಾರೆ.

ಜಾಗತಿನ ಗುಣಮಟ್ಟವನ್ನು ಭಾರತದಲ್ಲೂ ಕಾಯ್ದುಕೊಂಡಿದ್ದೇವೆ. ಗುಣಮಟ್ಟದ ವಿಚಾರದಲ್ಲಿ ನೆಸ್ಲೆ ಕಂಪನಿ ರಾಜಿಯಾಗುವುದಿಲ್ಲ ಮತ್ತು ಗ್ರಾಹಕರ ನಂಬಿಕೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಮ್ಯಾಗಿಯಲ್ಲಿ ನಾವು ಎಂಎಸ್‌ಜಿ ಸೇರಿಸುವುದಿಲ್ಲ. ಆದರೂ ಈ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ನಮಗೂ ಗ್ರಾಹಕರ ಗೊಂದಲಗಳ ಬಗ್ಗೆ ಅರಿವಿದೆ. ಹೀಗಾಗಿ ಇನ್ನು ಮುಂದೆ ಮೋನೋಸೋಡಿಯ ಇಲ್ಲವೆಂದು ಪ್ಯಾಕೆಟ್ ಮೇಲೆ ಲೆಬಲ್ ಅಂಟಿಸುವುದಾಗಿ ಪೌಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET paper leak: ಯುವಕರ ಭವಿಷ್ಯದ ಜೊತೆ ಆಟ, ತಕ್ಷಣ ಧರ್ಮೇಂದ್ರ ಪ್ರಧಾನ್ ವಜಾಗೊಳಿಸಿ: ರಾಹುಲ್ ಗಾಂಧಿ ಆಗ್ರಹ

ನಟ Jayam Ravi ವಿಚ್ಛೇದನ: ನಿರಾಕರಿಸಿದ್ದು ಯಾರು?, ಮದುವೆಯಾಗಿದ್ದು ಯಾರು? ಎಂಬುದನ್ನು ಸಾಬೀತು ಪಡಿಸುತ್ತೇನೆ: ಆರ್ತಿ ತಾಯಿ ಸುಜಾತ

IPL 2026: 2 ಓವರ್ ನಲ್ಲಿ ಪಂದ್ಯ ಕಳೆದುಕೊಂಡ GT, KKRಗೆ 29 ರನ್ ಗಳ ಭರ್ಜರಿ ಜಯ

IPL 2026: ಗಾಯದ ನಡುವೆಯೂ ಭರ್ಜರಿ ಬ್ಯಾಟಿಂಗ್, Sai Sudharsan ದಾಖಲೆ

'ಪ್ಲೀಸ್ ನಾಳೆ ಒಂದಿನ ಗೆಲ್ರಪ್ಪಾ': ಎದುರಾಳಿ RCB ಬೆನ್ನು ಬಿದ್ದ CSK ಫ್ಯಾನ್ಸ್! ಬೆಂಗಳೂರು ಗೆಲುವು ಚೆನ್ನೈಗೇಕೆ ಮುಖ್ಯ?

SCROLL FOR NEXT