ದೇಶ

ತತ್ಕಾಲ್ ಬುಕಿಂಗ್ ಇನ್ನು ಸುಲಭ

Rashmi Kasaragodu

ನವದೆಹಲಿ: ತತ್ಕಾಲ್ ಟಿಕೆಟ್ ಬುಕಿಂಗ್ ಈಗ ಸುಲಭವಾಗಲಿದೆ. ಐಆರ್‍ಸಿಟಿಸಿಯು ಹೆಚ್ಚು ಸಾಮರ್ಥ್ಯಯದ ಎರಡು ಸರ್ವರ್ ಗಳನ್ನು ಅಳವಡಿಸುವ ಮೂಲಕ ಬುಕಿಂಗ್ ನಲ್ಲಿ ವಿಳಂಬವನ್ನು ನಿವಾರಿಸಲು ತೀರ್ಮಾನಿಸಿದೆ. ಭಾರತದ ರೈಲುಗಳಲ್ಲಿ ಸುಮಾರು 4,00,000 ಟಿಕೆಟ್‍ಗಳು ತತ್ಕಾಲ್‍ನಲ್ಲಿ ಕಾಯ್ದಿರಿಸುತ್ತಾರೆ. ಜೂ.1ರ ರಾತ್ರಿ ಯಿಂದ ಸರ್ವರ್‍ಗಳು ಕಾರ್ಯಾರಂಭಿಸಿದ್ದು, ಈ ಮೊದಲು ಒಂದು ನಿಮಿಷಕ್ಕೆ 7,200 ಬುಕ್ ಆಗುತ್ತಿದ್ದ ಟಿಕೆಟ್‍ಗಳ ಸಂಖ್ಯೆ 14,000 ಆಗಿದೆ. ಬೇಸಿಗೆಯಲ್ಲಿ ರೈಲು ಟಿಕೆಟ್ ಕಾಯ್ದಿರಿಸುವಿಕೆ ಹೆಚ್ಚಾಗಿರುವುದರಿಂದ ಬುಕಿಂಗ್ ಸಾಮಥ್ರ್ಯಹೆಚ್ಚಿಸಲಾಗಿದೆ ಎಂದು ಐಆರ್‍ಸಿಟಿಸಿ ಹೇಳಿದೆ.

SCROLL FOR NEXT