ನವದೆಹಲಿ: ಕಲಾನಿಧಿ ಮಾರನ್ ಪ್ರಾಯೋಜಕತ್ವದ ಸನ್ ಟಿವಿ ನೆಟ್‍ವರ್ಕ್‍ಗೆ ಭಾರಿ ಹಿನ್ನಡೆಯಾಗಿದೆ.
ಕೇಂದ್ರ ಗೃಹ ಸಚಿವಾಲಯ 33 ದೂರದರ್ಶನ ವಾಹಿನಿಗಳಿಗೆ ಭದ್ರತಾ ಅನುಮತಿ ನೀಡಲು ನಿರಾಕರಿಸಿದೆ. ಇದರಿಂದಾಗಿ ಆ ಚಾನೆಲ್‍ಗಳ ಪ್ರಸಾರ ಪರವಾನಗಿ ರದ್ದಾಗುವ ಸಾಧ್ಯತೆಯಿದ್ದು, ಚಾನೆಲ್‍ಗಳ ಪ್ರಸಾರ ಸ್ಥಗಿತಗೊಳ್ಳಲಿದೆ.
ಈ ಕುರಿತು ಗೃಹ ವ್ಯವಹಾರಗಳ ಸಚಿವಾಲಯವು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತನ್ನ ನಿರ್ಧಾರ ತಿಳಿಸಿದೆ. ಸನ್ ನೆಟ್‍ವರ್ಕ್ ಭಾರತದ ಅತ್ಯಂತ ದೊಡ್ಡ ಮಾಧ್ಯಮ
ಸಮೂಹವಾಗಿದ್ದು, 95 ದಶಲಕ್ಷಕ್ಕೂ ಅಧಿಕ ಮನೆಗಳನ್ನು ತಲುಪುತ್ತಿದೆ. ಕಳೆದ ವರ್ಷ 33 ಚಾನೆಲ್‍ಗಳಿಗೆ 10 ವರ್ಷಗಳ ಭದ್ರತಾ ಪರವಾನಗಿ ನವೀಕರಣ ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು.