ದೇಶ

ನೋಯ್ಡಾ ಆಡಳಿತದ ವಿರುದ್ಧ ಕಿಡಿಕಾರಿದ ಮೃತ ಯೋಧನ ಕುಟುಂಬ

ನವದೆಹಲಿ: ಮಣಿಪುರ ಚಾಂಡೆಲ್ ಜಿಲ್ಲೆಯಲ್ಲಿ ಗುರುವಾರ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಯೋಧರ ಅಂತಿಮ ನಮನಕ್ಕೆ ರಾಜಕೀಯ ಗಣ್ಯರು ಆಗಮಿಸದಿರುವ ಕುರಿತಂತೆ ಮೃತ ಯೋಧರ ಕುಟುಂಬಗಳು ಕಿಡಿಕಾರಿದ್ದು, ಅಂತಿಮ ಸಂಸ್ಕಾರ ನಡೆಸಲು ತಿರಸ್ಕರಿಸಿದೆ ಎಂದು ತಿಳಿಬಂದಿದೆ.

ಮಣಿಪುರ ಚಾಂಡೆಲ್ ಜಿಲ್ಲೆಯಲ್ಲಿ ನಾಗಾ ಉಗ್ರರು ನಡೆಸಿದ ದಾಳಿಯಲ್ಲಿ 18 ಯೋಧರು ಸಾವನ್ನಪ್ಪಿದ್ದರು. ದಾಳಿಯಲ್ಲಿ ಹುತಾತ್ಮರಾದ ಯೋಧರ ದೇಹಗಳನ್ನು ಮಣಿಪುರ ರಾಜಧಾನಿ ಇಂಫಾಲಕ್ಕೆ ತಂದು ಅಂತಿಮ ಗೌರವ ಸಲ್ಲಿಸಲಾಗಿತ್ತು. ಯೋಧರ ಅಂತಿಮ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಸೇನೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಷ್ಟೇ ಹಾಜರಿದ್ದರು. ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಯಾರೊಬ್ಬರೂ ಹಾಜರಿರಲಿಲ್ಲ.

ನೋಯ್ಡಾ ಆಡಳಿತದ ಈ ಕ್ರಮವನ್ನು ದಾಳಿಯಲ್ಲಿ ಮೃತರಾದ ಜಗ್ವೀರ್ ಸಿಂಗ್ ಎಂಬ ಯೋಧನ ಕುಟುಂಬವು ತೀವ್ರವಾಗಿ ವಿರೋಧಿಸಿದ್ದು, ಯೋಧನ ದೇಹವನ್ನು ದಹನ ಮಾಡುವುದಿಲ್ಲ ಎಂದು ಹೇಳುತ್ತಿದೆ.

ಸರ್ಕಾರ ಮೃತ ಯೋಧರ ಕುಟುಂಬಕ್ಕೆ 30 ಲಕ್ಷ ಘೋಷಿಸಿದ್ದು ನಿಜ. ಆದರೆ, ಅದು ಮಾಧ್ಯಮಗಳ ಮುಂದೆ ಅಷ್ಟೇ. ಈವರೆಗೂ ಯಾವುದೇ ಅಧಿಕಾರಿಗಳು ಮೃತ ಯೋಧರ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿಲ್ಲ. ಕನಿಷ್ಟ ಪಕ್ಷ ಯೋಧರ ಅಂತಿಮ ನಮನಕ್ಕೂ ಹಾಜರಿರಲಿಲ್ಲ. ಅಧಿಕಾರಿಗಳು ನಿಜಕ್ಕೂ ಪರಿಹಾರ ನೀಡಬೇಕು ಎಂಬ ಮನಸ್ಸಿದ್ದರೆ, ನಮ್ಮನ್ನು ಭೇಟಿಯಾಗಿ ಪರಿಹಾರ ನೀಡಲಿ ಎಂದು ಮೃತ ಯೋಧ ಜಗ್ವೀರ್ ಸಿಂಗ್ ಕುಟುಂಬಸ್ಥರು ಹೇಳಿದ್ದಾರೆ.

SCROLL FOR NEXT