ಇಂದಿನಿಂದ ಕೈಲಾಸ-ಮಾನಸ ಸರೋವರ ಯಾತ್ರೆ ಆರಂಭ
ವಾರ್ಷಿಕ ಕೈಲಾಸ-ಮಾನಸ ಸರೋವರ ಯಾತ್ರೆಗೆ ಸೋಮವಾರ ಅಧಿಕೃತವಾಗಿ ಚಾಲನೆ ದೊರೆತಿದೆ. ಪ್ರಸ್ತುತ ಹಳೆಯ ಮಾರ್ಗವಾದ ಲಿಪುಲೇಖ್ನಲ್ಲಿ ಇಂದು ಯಾತ್ರೆಗೆ ಚಾಲನೆ ದೊರೆತಿದೆ.
ನವದೆಹಲಿ: ವಾರ್ಷಿಕ ಕೈಲಾಸ-ಮಾನಸ ಸರೋವರ ಯಾತ್ರೆಗೆ ಸೋಮವಾರ ಅಧಿಕೃತವಾಗಿ ಚಾಲನೆ ದೊರೆತಿದೆ. ಪ್ರಸ್ತುತ ಹಳೆಯ ಮಾರ್ಗವಾದ ಲಿಪುಲೇಖ್ನಲ್ಲಿ ಇಂದು ಯಾತ್ರೆಗೆ ಚಾಲನೆ ದೊರೆತಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯ ಹಳೆಯ ಮಾರ್ಗವಾದ ಲಿಪುಲೇಖ್ ಮಾರ್ಗದ ಯಾತ್ರೆಗೆ ಮಾತ್ರ ಇಂದು ಚಾಲನೆ ನೀಡಲಾಗಿದ್ದು, ಈ ಮಾರ್ಗವಾಗಿ ಸಂಚರಿಸುವವರಿಗೆ 1.5 ಲಕ್ಷ ವೆಚ್ಚ ತಗುಲಲಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಹೇಳಿದೆ. ಇನ್ನು ಹೊಸದಾಗಿ ಭಾರತ-ಚೀನಾ ಗಡಿ ಪ್ರದೇಶ ಪಶ್ಚಿಮ ಸಿಕ್ಕಿಂನಿಂದ ಟಿಬೇಟಿನ ಎರಡನೇ ದೊಡ್ಡನಗರ ಶಿಗಾಸ್ತೆಯ ನೂತನ ಮಾರ್ಗವಾದ ನಾಥು-ಲಾ ದಿಂದ ಕೈಲಾಸ ಯಾತ್ರೆಗೆ ಜೂ. 18 ರಂದು ಚಾಲನೆ ದೊರೆಯಲಿದೆ. ಈ ಮಾರ್ಗವಾಗಿ ಸಂಚರಿಸುವವರಿಗೆ 1.7 ಲಕ್ಷ ರೂ. ಖರ್ಚಾಗಲಿದೆ ಎಂದು ತಿಳಿದುಬಂದಿದೆ.
ಎಂಟು ತಂಡಗಳಲ್ಲಿ ತಲಾ 60 ಜನರ ಗುಂಪನ್ನು ಲಿಪುಲೇಖ್ ಮಾರ್ಗವಾಗಿ ಮತ್ತು ನಾಥು-ಲಾ ಮಾರ್ಗವಾಗಿ ಐದು ತಂಡಗಳಲ್ಲಿ ತಲಾ 50 ಜನರನ್ನು ಟಿಬೇಟಿನಲ್ಲಿರುವ ಕೈಲಾಶ್ ಮಾನಸರೋವರಕ್ಕೆ ಕಳುಹಿಸಲು ವಿದೇಶಾಂಗ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಲ್ಲದೆ ಯಾತ್ರೆ ಕೈಗೊಳ್ಳುವವರಿಗೆ ಹೆಚ್ಚಿನ ಮಾಹಿತಿ ನೀಡಲು ವೆಬ್ಸೈಟ್ (http://kmy.gov.in)ವೊಂದನ್ನು ಹೊರತರಲಾಗಿದೆ. ಎರಡೂ ಮಾರ್ಗವಾಗಿ ಯಾತ್ರೆಗೆ ತಗುಲುವ ವೆಚ್ಚ ಸೇರಿದಂತೆ ಯಾತ್ರೆ ಕೈಗೊಳ್ಳಲು ಜನರಿಗೆ ಬೇಕಾಗಿರುವ ಇನ್ನಿತರ ಮಾಹಿತಿಗಳು ಈ ನೂತ ವೆಬ್ ಸೈಟಿನಲ್ಲಿ ಇರಲಿವೆ.
ವೆಬ್ಸೈಟ್ನಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿದಾರರಿಗೆ ವಿಶಿಷ್ಟ ಗುರುತಿನ ಸಂಖ್ಯೆ ಸಹ ನೀಡಲಾಗುವುದು. ಅಲ್ಲದೇ ಯಾತ್ರೆಗೆ ಸಂಬಂಧಿಸಿ ಮಾಹಿತಿ
ಪಡೆಯಲು ಸಹಾಯವಾಣಿಯನ್ನು ಸಹ ತೆರೆಯಲಾಗಿದೆ.
ಸಹಾಯವಾಣಿ ಸಂಖ್ಯೆ 011-24300655
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.