ದೇಶ

ಮುಸ್ಲಿಂರ ಒತ್ತಡಕ್ಕೆ ಮಣಿದು ಸೂರ್ಯ ನಮಸ್ಕಾರ ಕೈಬಿಟ್ಟ ಕೇಂದ್ರ ಸರ್ಕಾರ

Vishwanath S

ನವದೆಹಲಿ: ಸೂರ್ಯ ನಮಸ್ಕಾರ ಇಸ್ಲಾಂಗೆ ವಿರುದ್ಧವಾದದ್ದು, ಹೀಗಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಬೇಡ ಎಂಬ ಭಾರತ ವೈಯಕ್ತಿಕ ಕಾನೂನು ಮಂಡಳಿ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಈ ಆಸನವನ್ನು ಕೈಬಿಟ್ಟಿದೆ.

ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಶಾಲೆಗಳಲ್ಲಿ ಯೋಗ ಮತ್ತು ಸೂರ್ಯ ನಮಸ್ಕಾರ ಕಡ್ಡಾಯ ಮಾಡಲಾಗಿದೆ ಎಂದು ಆರೋಪಿಸಿ, ಅದರ ವಿರುದ್ಧ ದೇಶಾದ್ಯಂತ ಆಂದೋಲನ ನಡೆಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿತ್ತು.

ಸೂರ್ಯ ನಮಸ್ಕಾರಕ್ಕೆ ಮುಸ್ಲಿಂರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ನಿಟ್ಟಿನಲ್ಲಿ ಯೋಗ ದಿನಾಚರಣೆಯಂದು ಸೂರ್ಯನಮಸ್ಕಾರ ಆಸನವನ್ನು ಕೈಬಿಡಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ರಾಜಸ್ತಾನ್, ಹರ್ಯಾಣ ಮತ್ತು ಮಧ್ಯಪ್ರದೇಶ ಸರ್ಕಾರಗಳು ಶಾಲೆಗಳ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರ್ಪಡೆ ಮತ್ತು ಸೂರ್ಯ ನಮಸ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಹೋಗಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರ್ಧರಿಸಿತ್ತು ಎನ್ನಲಾಗಿದೆ.

SCROLL FOR NEXT