ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿ 2013, ಏ.17ರಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಯುವತಿ ಲಿಶಾಗೆ ಸರ್ಕಾರ ನೀಡಿರುವ ಪರಿಹಾರದ ಕ್ರಮಗಳನ್ನು ಪರಿಶೀಲಿಸುವಂತೆ ಹೈಕೋರ್ಟ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅವರಿಗೆಸೂಚಿಸಿದೆ.
ಬಾಂಬ್ ಸ್ಫೋಟದಲ್ಲಿ ಕಾಲು ತೀವ್ರ ಗಾಯಗೊಂಡಿರುವ ಲಿಶಾ, ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದು, ಇದಕ್ಕಾಗಿ ರು.10 ಲಕ್ಷ ವ್ಯಯಿಸಿದ್ದೇವೆ. ಆದರೆ ಸರ್ಕಾರ ಕೇವಲ ರು.3 ಲಕ್ಷ ಮಾತ್ರ ಪರಿಹಾರ ನೀಡಿದೆ. ಸರ್ಕಾರ ನೀಡಿರುವ ಪರಿಹಾರ ಧನ ಸಮರ್ಪಕವಾಗಿಲ್ಲ.
ಈ ರೀತಿ ಸ್ಫೋಟದಲ್ಲಿ ಗಾಯಗೊಂಡವರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಈ ಕುರಿತು ಪೊನ್ನಣ್ಣ ಅವರಿಗೆ ಪರಿಹಾರ ಕ್ರಮದ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಿತು.