ನವದೆಹಲಿ: ``ನನ್ನ ವಿರುದ್ಧದ ಆರೋಪ ಗಳೆಲ್ಲ ಸುಳ್ಳು. ನನ್ನ ಕೆಲಸವೇ ಮುಂದೆ ಮಾತನಾಡಲಿದೆ''. ಇದು ಕೇಂದ್ರ ಜಾಗೃತಆಯುಕ್ತ (ಸಿವಿಸಿ)ರಾಗಿ ಸೋಮ ವಾರವಷ್ಟೇ ನೇಮಕಗೊಂಡ ಕೆ.ವಿ. ಚೌದರಿ ಅವರ ಮಾತು. ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಸದ್ಯಕ್ಕೆ ನಾನು ಕಾನೂನು ಮೊರೆ ಹೋಗು ವುದಿಲ್ಲ ಎಂದೂ ಅವರು ತಿಳಿಸಿದ್ದಾರೆ. ಚೌದರಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿ ರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು, ನೇಮಕ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರುವುದಾಗಿ ಘೋಷಿಸಿದ್ದಾರೆ.