ದೇಶ

ಜಾಹೀರಾತಿನಲ್ಲಿ 'ಸಲಿಂಗಿಗಳು'; ಸಂಚಲನ ಸೃಷ್ಟಿಸಿದ ಮಿಂತ್ರಾ

Rashmi Kasaragodu

ಮುಂಬೈ: ಆನ್‌ಲೈನ್ ಪೋರ್ಟಲ್ ಮಿಂತ್ರಾ (Myntra) ಜಾಹೀರಾತು ಹೊಸ ಸಂಚಲನ ಸೃಷ್ಟಿಸಿದೆ. ಮಹಿಳೆಯರ ಎಥಿನಿಕ್ ವೇರ್, 'ಅನೋಕ್' ಉಡುಗೆಯ ಜಾಹೀರಾತಿನಲ್ಲಿ ಸಲಿಂಗಿ ಮಹಿಳೆಯರಿಬ್ಬರನ್ನು ತೋರಿಸುವ ಮೂಲಕ ಈ ಜಾಹೀರಾತು ಎಲ್ಲರ ಗಮನ ಸೆಳೆದಿದೆ.

ಭಾರತದಲ್ಲಿ ಲೆಸ್ಬಿಯನ್ ಅಥವಾ ಸಲಿಂಗಿ ಮಹಿಳೆಯರನ್ನು ಜಾಹೀರಾತಿನಲ್ಲಿ ತೋರಿಸಿರುವುದು ಇದೇ ಮೊದಲು.

ಗೆಳತಿಯೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಹುಡುಗಿ ತಮ್ಮ ಮನೆಗೆ ಅಪ್ಪ ಅಮ್ಮನನ್ನು ಆಮಂತ್ರಿಸಿ, ಅವರ ಬರುವಿಕೆಗಾಗಿ ಕಾಯುವಾಗ ನಡೆಯುವ ಮಾತುಕತೆಗಳೇ ಈ ಜಾಹೀರಾತಿನ ಹೈಲೈಟ್.

ತಮ್ಮ ಸಂಬಂಧಗಳ ಬಗ್ಗೆ ಅಪ್ಪ ಅಮ್ಮನಿಗೆ ತಿಳಿಸಲು ಸಜ್ಜಾಗಿರುವಾಗ, ನಮ್ಮ ಸಂಬಂಧವನ್ನು ಅಪ್ಪ ಅಮ್ಮ ಸ್ವೀಕರಿಸುತ್ತಾರೆಯೇ? ಎಂದು ಆಕೆಯ ಗೆಳತಿ ಆತಂಕದಿಂದಲೇ ಕೇಳುತ್ತಾಳೆ.

ಮುಂದೇನಾಗುತ್ತದೆ ಎಂಬುದು ಗೊತ್ತಿಲ್ಲ, ಆದರೆ ನನಗೆ ನಿನ್ನ ಮೇಲೆ ಭರವಸೆ ಇದೆ ಎಂದು ಗೆಳತಿಯನ್ನು ಮುದ್ದಾಡಿ, ಹೆತ್ತವರನ್ನು ಸ್ವಾಗತಿಸಲು ಹೊರಡುವ ಜೋಡಿಯನ್ನು ಯಾವುದೇ ಕ್ಲೀಷೆಯಿಲ್ಲದೆ ಇಲ್ಲಿ ತೋರಿಸಲಾಗಿದೆ.

ಸಲಿಂಗಿಗಳನ್ನು ಬಳಸಿ ಚಿತ್ರೀಕರಿಸಿದ ಈ ಜಾಹೀರಾತಿನ ಬಗ್ಗೆ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಯಾಗಿದ್ದು, ಜಾಹೀರಾತಿನ ವೀಡಿಯೋ ಸಂಚಲನ ಸೃಷ್ಟಿಸಿದೆ.

SCROLL FOR NEXT