ಇಂಫಾಲ: ಜೂನ್ 4ರಂದು ಮಣಿಪುರದ ಚಾಂದೇಲ್ ನಲ್ಲಿ ಉಗ್ರರು ದಾಳಿ ನಡೆಸಿ 18 ಭಾರತೀಯ ಸೈನಿಕರನ್ನು ಹತ್ಯೆ ಸಂಬಂದ, ಕೂಂಬಿಂಗ್ ನಡೆಸುತ್ತಿರುವ ಮಣಿಪುರ ಪೊಲೀಸರು ಮೂವರು ಉಗ್ರರನ್ನು ಬಂಧಿಸಿದ್ದಾರೆ.
ಇಂಫಾಲದ ಪಶ್ಚಿಮ ಜಿಲ್ಲೆಯ ಪೊಲೀಸ್ ಕಮಾಂಡೋಗಳು ಅಮಾಂಚತ್ ಪ್ರದೇಶದ ಎನ್ ಎಸ್ ಸಿ ಎನ್(ಕೆ) ಉಗ್ರ ಸಂಘಟನೆಯ ಅಧ್ಯಕ್ಷನೆಂದು ಘೋಷಿಸಿಕೊಂಡಿರುವ ಕುಮ್ಲೋ ಅಬಿ ಅನಾಲ್ ಸೇರಿದಂತೆ ಮೂವರು ಉಗ್ರರನ್ನು ಬಂಧಿಸಿದ್ದಾರೆ. ಇಂಫಾಲದ ಸೂಪರ್ ಮಾರ್ಕೆಟ್ ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮೂವರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತೊಬ್ಬ ಎನ್ ಎಸ್ ಸಿ ಎನ್(ಕೆ) ಸಂಘಟನೆಯ ಕಾರ್ಯಕರ್ತ ಪಮ್ಮೇಯಿ ಕಾಕಿಲಾಂಗ್ ಅಲಿಯಾ ಎಂಬಾತನನ್ನು ಚುಕುಲೊಂಗ್ ಎಂಬ ಗ್ರಾಮದಲ್ಲಿ ಕಮಾಂಡೋಗಳು ಬಂಧಿಸಿದ್ದಾರೆ. ಇನ್ನೊಬ್ಬ ಉಗ್ರನನ್ನು ಇಂಪಾಲ ಪೂರ್ವ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.