ದೇಶ

ಲಾಭಕ್ಕಾಗಿ ಅಕ್ರಮ ಸಂಬಂಧ ತಪ್ಪೇನಲ್ಲ

Rashmi Kasaragodu

ಟೋಕಿಯೋ: ವಿಚಿತ್ರ ಕಾನೂನುಗಳು, ವಿಚಿತ್ರ ತೀರ್ಪುಗಳು ಹೇಗೆಲ್ಲಾ ಇರ್ತವೆ ಎಂಬುದಕ್ಕೆ ಇದೊಂದು ಬ್ಯೂಟಿಫಲ್ ಉದಾಹರಣೆ. ವ್ಯಾಪಾರಕ್ಕಾಗಿ ಅಕ್ರಮ ಸಂಬಂಧ ಇಟ್ಕೊಂಡ್ರೆ ತಪ್ಪಲ್ಲ ಅನ್ನೋ ವಿಚಾರನಾ ಎಲ್ಲಾದ್ರೂ ಕೇಳಿದ್ದೀರಾ? ಇರ್ಲಿಕ್ಕಿಲ್ಲ ಬಿಡಿ, ಯಾಕಂದ್ರೆ, ಅಕ್ರಮ ಸಂಬಂಧವೇ ತಪ್ಪು ಅಂತಿರುವಾಗ, ವ್ಯಾಪಾರಕ್ಕಾಗಿ ಅಕ್ರಮ ಸಂಬಂಧ ಅನ್ನೋದನ್ನ ಒಪ್ಪಿಕೊಳ್ಳಲಿಕ್ಕೆ ತೀರಾ ಕಷ್ಟ ಅಂತಾನೇ ಅನಿಸುತ್ತೆ. ಆದ್ರೆ ಜಪಾನ್‍ನ ಒಂದು ಕೋರ್ಟ್, ವಿವಾಹೇತರ ಸಂಬಂಧವನ್ನ ಅಕ್ರಮವಲ್ಲ ಎಂದೇಳಿ ತೀರ್ಪು ಕೊಟ್ಟಿದೆ. ವ್ಯಾಪಾರ ಉದ್ದೇಶಕ್ಕಾಗಿ, ಲಾಭದ ಉದ್ದೇಶಕ್ಕಾಗಿ ಇಂಥ ಸಂಬಂಧಇಟ್ಟುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಹೇಳಿದೆ.

ಆಗಿದ್ದಿಷ್ಟು: ಟೋಕಿಯೋದ ವಯಸ್ಕರ ಮನೋರಂಜನೆಯ ಕ್ಲಬ್  ಒಂದರ ಒಡತಿ ಜತೆ ತನ್ನ ಸಿರಿವಂತ ಗಂಡ ನಿಯಮಿತ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದಾನೆ ಎಂದು ಪತ್ನಿಯೊಬ್ಬಳು ಕೋರ್ಟ್ ಮೊರೆ ಹೋಗಿದ್ದಳು. ಇದರಿಂದ ತನ್ನ ಮನಕ್ಕೆ ಘಾಸಿಯಾಗಿದ್ದು, ಆತನಿಂದ ತನಗೆ ಪರಿಹಾರವಾಗಿ ರು. 21 ಲಕ್ಷ ಕೊಡಿಸಬೇಕು ಎಂದು ಕೋರಿದ್ದಳು. ಆದರೆ ಕೋರ್ಟ್ ನೀಡಿದ ತೀರ್ಪು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದು ಆರ್ಥಿಕ ಉದ್ದೇಶದ ಮೇಲೆ ಹುಟ್ಟಿಕೊಂಡ ದೈಹಿಕ ಸಂಪರ್ಕ. ಕ್ಲಬ್‍ನ ಒಡತಿ ತನ್ನ ಗ್ರಾಹಕರ ಸಂತೃಪ್ತಿಗಾಗಿ, ತನ್ನ ವ್ಯಾಪಾರದಲ್ಲಿ ಲಾಭ ಹೆಚ್ಚಿಸಿಕೊಳ್ಳುವ ಸಲುವಾಗಿ ಸಂಬಂಧ ಇಟ್ಟುಕೊಳ್ಳುವುದನ್ನು ವಿವಾಹೇತರ ಸಂಬಂಧ ಅನ್ನಲಾಗುವುದಿಲ್ಲ. ಇದು ಕೇವಲ ವ್ಯಾವಹಾರಿಕವಷ್ಟೆ. ಇದು ವೇಶ್ಯಾವಾಟಿಕೆಗಿಂತ ಬಿsನ್ನವಲ್ಲ. ಆದ್ದರಿಂದ ಇಲ್ಲಿ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ. ಹೆಣ್ಣು ಹಣ ಪಡೆಯದೇ ಈ ರೀತಿ ಸಂಬಂಧ ಹೊಂದಿದ್ದಲ್ಲಿ ಅದನ್ನು ಪರಿಗಣಿಸಬಹುದಿತ್ತು ಎಂದು ತೀರ್ಪಿತ್ತು ಕೋರ್ಟ್ ಪ್ರಕರಣವನ್ನು ಮುಗಿಸಿದೆ.


ತನ್ನ ಕ್ಲಬ್‍ನ ಗ್ರಾಹಕರನ್ನು ಸೆಳೆಯಲು, ಹೆಚ್ಚು ಹಣ ಹರಿದುಬರುವಂತೆ ಮಾಡಲು ಆಕೆ ತನ್ನ ಗ್ರಾಹಕರೊಂದಿಗೆ ಮಲಗಿದ್ದಾಳೆ. ಇಲ್ಲಿ ಭಾವನೆಗಳಿಗೆಲ್ಲ ಅವಕಾಶವಿಲ್ಲ. ಗ್ರಾಹಕನ ಪತ್ನಿಗೆ ಬೇಸರ ಆಗಿರಬಹುದು. ಆದರೆ ಇದನ್ನು ವಿವಾಹೇತರ ಸಂಬಂಧ ಎಂದು ಕಾನೂನು ಒಪ್ಪುವುದಿಲ್ಲ.

 -ಟೋಕಿಯೋದ ಜಿಲ್ಲಾ ನ್ಯಾಯಾಧೀಶ ಮಸಮಿಟ್ಸು

SCROLL FOR NEXT