ಮ್ಯಾಗಿ ನೂಡಲ್ಸ್ 
ದೇಶ

320 ಕೋಟಿ ಮೌಲ್ಯದ ಮ್ಯಾಗಿ ನೂಡಲ್ಸ್ ನಾಶ ಕಾರ್ಯ ಪ್ರಗತಿಯಲ್ಲಿದೆ: ನೆಸ್ಲೆ

ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧಕ್ಕೀಡಾದ ಮ್ಯಾಗಿ ನೂಡಲ್ಸ್ ಉತ್ಪಾದಕ ಸಂಸ್ಧೆ ನೆಸ್ಲೆ ತಾನು ಈಗಾಗಲೇ...

ನವದೆಹಲಿ: ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ದೇಶಾದ್ಯಂತ ನಿಷೇಧಕ್ಕೀಡಾದ ಮ್ಯಾಗಿ ನೂಡಲ್ಸ್ ಉತ್ಪಾದಕ ಸಂಸ್ಧೆ ನೆಸ್ಲೆ ತಾನು ಈಗಾಗಲೇ ಉತ್ಪಾದಿಸಿದ್ದ 320 ಕೋಟಿ ರೂಪಾಯಿ ಮೌಲ್ಯದ ಮ್ಯಾಗಿಯನ್ನು ನಾಶ ಮಾಡಲು ಮುಂದಾಗಿದೆ.

ಮ್ಯಾಗಿ ನೂಡಲ್ಸ್ ನಲ್ಲಿ ನಿಗದಿತ ಮಿತಿಗಿಂತಲೂ ಸೀಸ್‌ ಹಾಗೂ ಮೊನೊ ಸೋಡಿಯಂ ಗುಟ್ಲಮೆಟ್‌ ಅಂಶಗಳಿರುವ ಕಾರಣ ರಾಷ್ಟ್ರೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಮ್ಯಾಗಿ ಮಾರಾಟದ ಮೇಲೆ ಜೂನ್ 5 ರಂದು ನಿಷೇಧ ಹೇರಿತ್ತು.

ಗ್ರಾಹಕರ ಹಿತಾದೃಷ್ಠಿಯಿಂದ ಮ್ಯಾಗಿ ಮಾರಾಟವನ್ನು ಹಿಂಪಡೆದಿತ್ತು. ಇದೀಗ ಮಾರುಕಟ್ಟೆ, ಕೈಗಾರಿಕೆ ಹಾಗೂ ವಿತರಣಾ ಕೇಂದ್ರಗಳಿಂದ ಮ್ಯಾಗಿಯನ್ನು ಹಿಂಪಡೆದು ಅದನ್ನು ನಾಶ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ನೆಸ್ಲೆ ಸಂಸ್ಥೆ ತಿಳಿಸಿದೆ.

ನಮ್ಮ ಪಾಲುದಾರರದ್ದು ಸೇರಿಕೊಂಡು ಮಾರುಕಟ್ಟೆಯಲ್ಲಿರುವ ಮ್ಯಾಗಿ ಮಾರಾಟ ಮೌಲ್ಯ 210 ಕೋಟಿ ರೂಪಾಯಿ. ಅಲ್ಲದೇ, ಮ್ಯಾಗಿ ಹಿಂಪೆಡೆಯುವ ಘೋಷಣೆ ಹೊರಬಿದ್ದಾಗ ನಮ್ಮ ಕಾರ್ಖಾನೆಗಳು ಹಾಗೂ ವಿತರಣಾ ಕೇಂದ್ರಗಳಲ್ಲಿದ್ದ  ಮ್ಯಾಗಿ ಹಾಗೂ ಸಂಬಂಧಿತ ಸರಕುಗಳ ಮೌಲ್ಯ 110 ಕೋಟಿ ರೂಪಾಯಿ’ ಎಂದು ನೆಸ್ಲೆ ಇಂಡಿಯಾ ಮುಂಬೈ ಷೇರು ವಿನಿಯಮ ಕೇಂದ್ರಕ್ಕೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Kulgam Encounter: LeT ಸಂಘಟನೆಯ ಪ್ರಮುಖ ಉಗ್ರ ಲತೀಫ್ ಭಟ್ ಹೊಡೆದುರುಳಿಸಿದ ಭಾರತೀಯ ಸೇನೆ! ಮಸೀದಿಯಲ್ಲಿ ಅಡಗಿದ್ದ ಭಯೋತ್ಪಾದಕ!

'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ನಿವಾಸ ಸೇರಿ ಹುಬ್ಬಳ್ಳಿಯಲ್ಲಿ ಲೋಕಾಯುಕ್ತ ದಾಳಿ; Video

IPLಗೆ ಧೋನಿ ವಿದಾಯ: 'ಮೆಂಟರ್ ಆಗಿ ಮಾಹಿ ಉಪಸ್ಥಿತಿ ಯುವ ಆಟಗಾರರಿಗೆ ವರದಾನ': ಪಾಕ್ ಮಾಜಿ ಕ್ರಿಕೆಟಿಗನ ಮೆಚ್ಚುಗೆ!

ಐಪಿಎಲ್ 2027: ಎಲ್ಲಾ 10 ತಂಡಗಳ ಆಟಗಾರರ ರಿಲೀಸ್ ಪಟ್ಟಿ ಪ್ರಕಟ; 18 ಕೋಟಿ ರೂಗೆ ಖರೀದಿಸಿದ್ದ ಆಟಗಾರನಿಗೇ ಗೇಟ್`ಪಾಸ್ ಕೊಟ್ಟ ಕೆಕೆಆರ್, RCB ಕಥೆ ಏನು?