ನವದೆಹಲಿ: ನಾಗರೀಕ ಸೇವಾ ಪರೀಕ್ಷೆಯಲ್ಲಿ ಅಲ್ಪಸಂಖ್ಯಾತರನ್ನು ತೃತೀಯ ಲಿಂಗದವರೆಂದು ಪರಿಗಣಿಸಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಯುಪಿಎಸ್ ಸಿ ದೆಹಲಿ ಹೈಕೋರ್ಟ್ ಗೆ ಬುಧವಾರ ಹೇಳಿದೆ.
ತೃತೀಯ ಲಿಂಗಿ ಸೇರ್ಪಡೆ ಆದೇಶ ಕುರಿತಂತೆ ಸುಪ್ರೀಂಕೋರ್ಟ್ ಈ ವರೆಗೂ ಸ್ಪಷ್ಟನೆ ನೀಡಿಲ್ಲ. ಸುಪ್ರೀಂಕೋರ್ಟ್ ಸ್ಪಷ್ಟನೆ ನೀಡುವವರೆಗೂ ಈ ಕುರಿತಂತೆ ಯಾವುದೇ ಹೊಸ ನಿಯಮಗಳನ್ನು ಸೇರ್ಪಡೆ ಮಾಡಲು ಸಾಧ್ಯವಿಲ್ಲ. ಸುಪ್ರೀಂ ಸ್ಪಷ್ಟ ಆದೇಶ ಬಂದ ನಂತರವಷ್ಟೇ ಹೊಸ ನಿಯಮಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ದೆಹಲಿ ನ್ಯಾಯಾಲಯಕ್ಕೆ ಯುಪಿಎಸ್ ಸಿ ಸ್ಪಷ್ಟನೆ ನೀಡಿದೆ.
ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಕೇಂದ್ರೀಯ ಲೋಕಸೇವಾ ಪರೀಕ್ಷೆಯಲ್ಲಿ ತೃತೀಯ ರಂಗವೆಂದು ಪರಿಗಣನೆಯಾಗಿರುವ ನಮಗೆ ಅವಕಾಶ ಸಿಗುತ್ತಿಲ್ಲ. ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಲಿಂಗ ಆಯ್ಕೆ ಮಾಡಲು ನಮಗೆ ಅವಕಾಶವೇ ನೀಡಿಲ್ಲ. ಅಲ್ಪಸಂಖ್ಯಾತರು ಹಿಂದುಳಿದವರಾಗಿದ್ದು, ಸರ್ಕಾರದಿಂದ ಬರುವ ಮೀಸಲಾತಿಗಳನ್ನು ಅವರಿಗೆ ನೀಡುವಂತೆ ಹಾಗೂ ಸಮಾಜದಲ್ಲಿ ಸಮಾನತೆಯಿಂದ ಕಾಣುಬೇಕು ಎಂದು ಹೇಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಆದರೂ ಈವರೆಗೂ ಅಲ್ಪಸಂಖ್ಯಾತರನ್ನು ಸಮಾನತೆಯಿಂದ ಕಾಣಲಾಗುತ್ತಿಲ್ಲ ಎಂದು ಹೇಳಿ ಅರ್ಜಿಯೊಂದು ದಾಖಲಾಗಿತ್ತು. ಈ ಕುರಿತಂತೆ ಕೂಡಲೇ ಸ್ಪಷ್ಟನೆ ನೀಡುವಂತೆ ಯುಪಿಎಸ್ ಸಿ ಆಡಳಿತ ಮಂಡಳಿಗೆ ಹೈ ಕೋರ್ಟ್ ಸೂಚನೆ ನೀಡಿತ್ತು.
ದೆಹಲಿ ಹೈ ಕೋರ್ಟ್ ನ ಈ ಸೂಚನೆಗೆ ಸ್ಪಷ್ಟನೆ ನೀಡಿರುವ ಯುಪಿಎಸ್ ಸಿ ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡುವವರೆಗೂ ಈ ಕುರಿತಂತೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.